ಬೆಂಗಳೂರು: ಸಿಇಟಿಗೆ ಅರ್ಜಿ ಸಲ್ಲಿಸಿ, ನೀಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್, ಅರ್ಜಿ ಸಂಖ್ಯೆ ಹಾಗೂ ನೀಟ್ ಪ್ರವೇಶ ಪತ್ರದ ಅಪ್ ಲೋಡ್ ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಲಿಂಕ್ ಬಿಡುಗಡೆ ಮಾಡಿದೆ.
ನೀಟ್ ಫಲಿತಾಂಶಕ್ಕೆ ಕಾದು, ನಂತರ ನೋಂದಣಿ ಪ್ರಕ್ರಿಯೆ ಆರಂಭಿಸುವುದರಿಂದ ಗಡಿಬಿಡಿ ಆಗುತ್ತಿತ್ತು. ಹೀಗಾಗಿ ಈ ಬಾರಿ ನೀಟ್ ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸುವುದರಿಂದ ಕೊನೆ ಕ್ಷಣದ ಗೊಂದಲಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ನೀಟ್ ಪರೀಕ್ಷೆ ಬರೆದ ಎಲ್ಲರೂ ನೀಟ್ ರೋಲ್ ನಂಬರ್ ದಾಖಲಿಸಲು ಕೋರಲಾಗಿದೆ. ಫಲಿತಾಂಶ ಬಂದ ನಂತರ ಅರ್ಹರಿಗೆ ಮಾತ್ರ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ನೀಟ್ ರೋಲ್ ನಂಬರ್ ದಾಖಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
KEA Common Online Application 2026 https://share.google/G6gZpYapRTvrhjvzE

