HomeEntertainmentಕೆಡಿ ಸಿನಿಮಾ ಹಾಡಿನ ವಿವಾದ: ಕ್ಷಮೆಯಾಚಿಸಿದ ನೋರಾ ಫತೇಹಿ: ಹಾನಿಗೆ ಪ್ರತಿಯಾಗಿ ಅನಾಥ ಹೆಣ್ಣುಮಕ್ಕಳ ಶಿಕ್ಷಣಕ್ಕೆ...

ಕೆಡಿ ಸಿನಿಮಾ ಹಾಡಿನ ವಿವಾದ: ಕ್ಷಮೆಯಾಚಿಸಿದ ನೋರಾ ಫತೇಹಿ: ಹಾನಿಗೆ ಪ್ರತಿಯಾಗಿ ಅನಾಥ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ನಿರ್ಧಾರ

ನವದೆಹಲಿ: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ‘ಸರ್ಸೆ ಸೆರಗ’ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಬಾಲಿವುಡ್ ನಟಿ ನೋರಾ ಫತೇಹಿ ಕ್ಷಮೆಯಾಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಸರ್ಸೆ ಸೆರಗ’ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ. ಈ ಹಾಡಿನಲ್ಲಿ ನೋರಾ ಫತೇಹಿ ಹೆಜ್ಜೆ ಹಾಕಿದ್ದರು. ಸರ್ಸೆ ಸೆರಗ ಹಾಡು ಭಾರಿ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ನಟಿ ನೋರಾ ಫತೇಹಿ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಕ್ಷಮೆ ಕೋರಿದ್ದಾರೆ.

ಮಹಿಳಾ ಆಯೋಗದ ಮುಂದೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೋರಾ, ಕೆಡಿ ಚಿತ್ರದ ಹಾಡಿನ ವಿಚಾರವಾಗಿ ನನ್ನ ಕ್ಷಮಾಪಣೆಯನ್ನು ಆಯೋಗದ ಮುಂದೆ ಸಲ್ಲಿಸಿದ್ದೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಓರ್ವ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದ್ದಾರೆ.

ಆಯೋಗದ ಷರತ್ತಿನ ಅನುಸಾರ ಉದ್ದೇಶಪೂರ್ವಕವಲ್ಲದಿದ್ದರೂ ತಪ್ಪಿನಿಂದಾಗಿ ಸಮಾಜಕ್ಕೆ ಆದ ಹಾನಿ ಪ್ರತಿಯಾಗಿ ಕೆಲವು ಅನಾಥ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ಹಾಡಿನ ವಿವಾದಕ್ಕೆ ಸಂಅಬ್ಂಧಿಸಿದಂತೆ ಕೆಲ ದಿನಗಳ ಹಿಂದೆ ನಟ ಸಂಜಯ್ ದತ್ ಕೂಡ ಮಹಿಳಾ ಆಯೋಗದ ಮುಂದೆ ಹಾಜರಾಗಿ ಕ್ಷಮಾಪಣೆ ಕೇಳಿದ್ದರು. ಅಲ್ಲದೇ ಆಯೋಗದ ಷರತ್ತಿನಂತೆ ಬುಡಕಟ್ಟು ಜನಾಂಗದ 50 ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗಲು ಒಪ್ಪಿಕೊಂಡಿದ್ದರು.

ಕೆಡಿ ಸಿನಿಮಾದ ಸರ್ಸೆ ಸೆರಗ ಹಾಡಿನ ಸಾಹಿತ್ಯ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರಿಗೆ ಅಪಮಾನವಾಗುವಂತೆ ಹಾಡಿನ ಸಾಲುಗಳಿರುವುದು ಆಕ್ರೋಶಕ್ಕೆ ಕಾರಣವಗಿತ್ತು. ವಿವಾದದ ಬೆನ್ನಲ್ಲೇ ಯೂಟ್ಯೂಬ್ ನಿಂದ ಹಾಡನ್ನು ತೆಗೆದು ಹಾಕಲಾಗಿತ್ತು. ಅಲ್ಲದೇ ಸಾಹಿತ್ಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular