HomeLatest NewsCM ನಂಬರ್ ಪ್ಲೇಟ್ ಇರುವ ವಿಜಯ್ ಕಾರು..ಎರಡೂವರೆ ವರ್ಷಗಳ ಹಿಂದೆಯೇ '2026' ರ ಗೆಲುವು ಫಿಕ್ಸ್...

CM ನಂಬರ್ ಪ್ಲೇಟ್ ಇರುವ ವಿಜಯ್ ಕಾರು..ಎರಡೂವರೆ ವರ್ಷಗಳ ಹಿಂದೆಯೇ ‘2026’ ರ ಗೆಲುವು ಫಿಕ್ಸ್ ಆಗಿತ್ತಾ..!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ‘ಟಿವಿಕೆ’ (TVK) ಪಕ್ಷವು ಸುನಾಮಿಯಂತೆ ಅಲೆ ಎಬ್ಬಿಸಿದೆ. ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮುವ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಈ ಭರ್ಜರಿ ಗೆಲುವಿನ ಬೆನ್ನಲ್ಲೇ, ವಿಜಯ್ ನಟನೆಯ ‘GOAT’ (The Greatest of All Time) ಸಿನಿಮಾದಲ್ಲಿನ ಕಾರಿನ ನಂಬರ್ ಪ್ಲೇಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಆ ನಂಬರ್ ಪ್ಲೇಟ್ ರಹಸ್ಯವೇನು ?

2024ರಲ್ಲಿ ಬಿಡುಗಡೆಯಾದ ‘GOAT’ ಸಿನಿಮಾದಲ್ಲಿ ವಿಜಯ್ ಬಳಸಿದ ಕಾರಿನ ನಂಬರ್ ಪ್ಲೇಟ್ TN 07 CM 2026 ಎಂದಿದೆ. ಇದರ ಹಿಂದೆ ಅಡಗಿರುವ ಆಸಕ್ತಿದಾಯಕ ಲಾಜಿಕ್‌ಗಳು ಹೀಗಿವೆ:

  • TN: ಅಂದರೆ ತಮಿಳುನಾಡು.
  • 07: ಇದು ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಎಂ.ಎಸ್. ಧೋನಿಯವರ ಜರ್ಸಿ ನಂಬರ್ ಅನ್ನು ಸೂಚಿಸುತ್ತದೆ ಎನ್ನಲಾಗಿದೆ.
  • CM 2026: ಇದರರ್ಥ 2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ಸಿನಿಮಾ ಮೂಲಕವೇ ಸಂಕೇತಿಸಿದ್ದರು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

CSK ಜೊತೆಗಿನ ಕನೆಕ್ಷನ್:

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಜರ್ಸಿ ಬಣ್ಣ ಹಳದಿ ಮತ್ತು ಅವರ ಟ್ಯಾಗ್ ಲೈನ್ ‘ವಿಸಿಲ್ ಪೋಡು’. ಕಾಕತಾಳೀಯವೆಂದರೆ, ವಿಜಯ್ ಅವರ ‘ಟಿವಿಕೆ’ ಪಕ್ಷದ ಧ್ವಜದಲ್ಲಿಯೂ ಹಳದಿ ಬಣ್ಣವಿದ್ದು, ಅವರ ಪಕ್ಷದ ಗುರುತು ಕೂಡ ‘ವಿಸಿಲ್’ ಆಗಿದೆ. ಹೀಗಾಗಿ ಧೋನಿ ಮತ್ತು ವಿಜಯ್ ನಡುವಿನ ಈ ಸಾಮ್ಯತೆಯನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ರಿಶಾ ಭೇಟಿ ಮತ್ತು ಬರ್ತ್‌ಡೇ ಸಂಭ್ರಮ:

ಇನ್ನೊಂದು ವಿಶೇಷವೆಂದರೆ, ಇಂದು (ಮೇ 4) ನಟಿ ತ್ರಿಶಾ ಅವರ ಹುಟ್ಟುಹಬ್ಬ. ಇದೇ ದಿನ ಚುನಾವಣಾ ಫಲಿತಾಂಶ ಹೊರಬಿದ್ದು ವಿಜಯ್ ಗೆಲುವು ಸಾಧಿಸಿದ್ದಾರೆ. ತ್ರಿಶಾ ಅವರು ತಿರುಪತಿ ಶ್ರೀವಾರಿ ದರ್ಶನ ಮುಗಿಸಿದ ನಂತರ ನೇರವಾಗಿ ವಿಜಯ್ ಅವರ ಮನೆಗೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಮತ್ತು ತ್ರಿಶಾ ಜೊತೆಯಾಗಿ ನಟಿಸಿದ್ದು, ನಿಜ ಜೀವನದಲ್ಲೂ ಈ ಗೆಲುವಿನ ಸಂಭ್ರಮವನ್ನು ಜೊತೆಯಾಗಿ ಆಚರಿಸಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಒಟ್ಟಿನಲ್ಲಿ, ಎರಡು ವರ್ಷಗಳ ಹಿಂದೆಯೇ ತನ್ನ ರಾಜಕೀಯ ಭವಿಷ್ಯವನ್ನು ಸಿನಿಮಾದ ನಂಬರ್ ಪ್ಲೇಟ್ ಮೂಲಕ ವಿಜಯ್ ಸಾರಿ ಹೇಳಿದ್ದರು ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular