HomeLatest Newsವಿಜಯ್ ನಂಬಿ ಚುನಾವಣೆಗೆ ಧುಮುಕಿದ ಅಭಿಮಾನಿ, ಆಟೊ ಡ್ರೈವರ್ ಕಥೆ ಏನಾಯಿತು?

ವಿಜಯ್ ನಂಬಿ ಚುನಾವಣೆಗೆ ಧುಮುಕಿದ ಅಭಿಮಾನಿ, ಆಟೊ ಡ್ರೈವರ್ ಕಥೆ ಏನಾಯಿತು?

ಇಂದು ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದಿದೆ.

ಇನ್ನು ತಮಿಳುನಾಡಿನಲ್ಲಿ ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಗದೇ ಇದ್ದರೂ ವಿಜಯ್ ನೇತೃತ್ವದ ಟಿವಿಕೆ 107 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಸನಿಹದಲ್ಲಿದೆ. ಈ ಮೂಲಕ ವಿಜಯ್ ಕರುಣಾನಿಧಿ ಬಳಿಕ ಇತಿಹಾಸ ಸೃಷ್ಟಿಸಿದ್ದು, ಮೊದಲ ಚುನಾವಣೆಯಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

ಹೀಗೆ ಇತಿಹಾಸ ಬರೆದಿರುವ ವಿಜಯ್ ಟಿವಿಕೆ ಪಕ್ಷದಲ್ಲಿ ಹೆಸರಾಂತ ರಾಜಕಾರಣಿಗಳಿಲ್ಲ, ಬದಲಾಗಿ ವಿಜಯ್ ಆರಿಸಿ ಟಿಕೆಟ್ ನೀಡಿದ ಅಭ್ಯರ್ಥಿಗಳಿಗೆ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಖ ನೋಡಿ ಮಣೆ ಹಾಕಿದ್ದಾರೆ ಎನ್ನಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಅದೇ ರೀತಿ ಈ ಹಿಂದಿನಿಂದಲೂ ವಿಜಯ್ ಅಭಿಮಾನಿಯಾಗಿರುವ ಹಾಗೂ ಆಟೊ ಚಾಲಕನಾಗಿ ತನ್ನ ಬದುಕು ಕಟ್ಟಿಕೊಂಡ ವಿಜಯ್ ದಾಮು ಎಂಬಾತ ಇದೀಗ ಎಂಎಲ್‌ಎಯಾಗಿ ಗೆದ್ದು ಬೀಗಿದ್ದಾರೆ.

ವಿಧಾನಸಭಾ ಕ್ಷೇತ್ರ 17 ರೋಯಾಪುರಂನಲ್ಲಿ ಸ್ಪರ್ಧಿಸಿದ್ದ ಕೆ. ವಿಜಯ್ ದಾಮು ಡಿಎಂಕೆ ಅಭ್ಯರ್ಥಿ ಡಾ. ಎ. ಸುಬೈರ್ ಖಾನ್ ವಿರುದ್ಧ 14249 ಮತಗಳ ಅಂತರದಿಂದ ಗೆಲುವನ್ನು ದಾಖಲಿಸಿದ್ದಾರೆ. ಕೆ. ವಿಜಯ್ ದಾಮು 59091 ಮತಗಳನ್ನು ಪಡೆದರೆ, ಸುಬೈರ್ ಖಾನ್ 44842 ಮತಗಳನ್ನು ಪಡೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular