HomeIPL 2026ವೈಭವ್ ಸೂರ್ಯವಂಶಿ ವಿಕೆಟ್ ಪಡೆದು ಕಿರುಚಿದ್ದ ಜೇಮಿಸನ್‌ಗೆ ಬಿತ್ತು ದಂಡ; ಇದ್ಯಾವ ನಿಯಮ ಗುರು? ವಿಕೆಟ್...

ವೈಭವ್ ಸೂರ್ಯವಂಶಿ ವಿಕೆಟ್ ಪಡೆದು ಕಿರುಚಿದ್ದ ಜೇಮಿಸನ್‌ಗೆ ಬಿತ್ತು ದಂಡ; ಇದ್ಯಾವ ನಿಯಮ ಗುರು? ವಿಕೆಟ್ ಪಡೆದ ಬೌಲರ್ ತೆಪ್ಪಗಿರಬೇಕಾ?

ನಿನ್ನೆ ( ಮೇ 1 ) ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 226 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 226 ರನ್ ಬಾರಿಸಿತು.

ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ವಂಡರ್ ಕಿಡ್ ಎಂದೇ ಖ್ಯಾತಿಯನ್ನು ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ ಟೂರ್ನಿಯಲ್ಲಿ ಅಬ್ಬರಿಸಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಆಟಗಾರ. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ಅವರು ಒಳ್ಳೆಯ ಆಟವನ್ನಾಡಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರಾ ಎಂಬ ಕುತೂಹಲ ಮೂಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೈಲ್ ಜೇಮಿಸನ್ ಎರಡನೇ ಓವರ್‌ನ ಐದನೇ ಎಸೆತದಲ್ಲಿ ವೈಭವ್ ಸೂರ್ಯವಂಶಿಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಜೇಮಿಸನ್ ಯಾರ್ಕರ್‌ಗೆ ವೈಭವ್ ಬ್ಯಾಟ್‌ನಿಂದ ಉತ್ತರವಿರಲಿಲ್ಲ. ಚೆಂಡು ವಿಕೆಟ್‌ಗಳನ್ನು ನೆಲಕ್ಕೆ ಉರುಳಿಸಿತ್ತು.

ಹೀಗೆ ವಿಕೆಟ್ ಪಡೆದ ಜೇಮಿಸನ್ ಜೋರಾಗಿ ಕಿರುಚಿ ವೈಭವ್ ಸೂರ್ಯವಂಶಿಯತ್ತ ನೋಡಿ ಚಪ್ಪಾಳೆ ತಟ್ಟುತ್ತಾ ಕಿರುಚಾಡಿದ್ದರು. ಇದನ್ನು ಕಂಡು ನೆಟ್ಟಿಗರು ಚಿಕ್ಕ ಹುಡುಗನ ಮೇಲೆ ಈ ರೋಷಾವೇಶ ಅನಗತ್ಯ ಎಂದಿದ್ದರು. ಇನ್ನೂ ಕೆಲವರು ಆಟವೆಂದ ಮೇಲೆ ಇಂಥ ಸಂಭ್ರಮಾಚರಣೆ ಸಹಜ ಎಂದಿದ್ದರು.

ಹೌದು, ಬೌಲರ್‌ಗಳನ್ನು ಹೆಸರಿನಿಂದ ನಾನು ನೋಡುವುದಿಲ್ಲ, ಚೆಂಡನ್ನು ನೋಡಿ ಬೌಂಡರಿ ಬಾರಿಸುವುದು ನನ್ನ ಉದ್ದೇಶ ಎಂದು ಹೇಳಿಕೆ ಕೊಟ್ಟಿದ್ದ ವೈಭವ್‌ ಸೂರ್ಯವಂಶಿಗೆ ಇಂಥ ಸಮಯದಲ್ಲಿ ಚಿಕ್ಕ ಹುಡುಗ ಎಂದು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಬೇಡಿ ಎಂದು ಅನೇಕರು ಕಾಮೆಂಟ್ ಮಾಡಿದರು.

ಇದೀಗ ಬಿಸಿಸಿಐ ಕೈಲ್ ಜೇಮಿಸನ್‌ಗೆ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿದ್ದು, ಎಚ್ಚರಿಕೆಯನ್ನೂ ಸಹ ನೀಡಿದೆ. ಹೀಗೆ ಸಂಭ್ರಮಾಚರಣೆ ಮಾಡಿದ್ದಕ್ಕೆ ಡಿಮೆರಿಟ್ ಪಾಯಿಂಟ್ ವಿಧಿಸುವ ಹಾಗಿದ್ದರೆ ವಿಕೆಟ್ ಪಡೆಯುವ ಬೌಲರ್ ಏನನ್ನೂ ಮಾಡದೇ ತೆಪ್ಪಗೆ ಇರಬೇಕಾ ಎಂಬ ಪ್ರಶ್ನೆ ಮೂಡಿದೆ.

video: https://twitter.com/TukTuk_Academy/status/2050429336759713809?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular