HomeBusinessಆಟೋ ಚಾಲಕರಿಗೆ ಶಾಕ್: ಆಟೋ ಗ್ಯಾಸ್ ದರವೂ ಏರಿಕೆ

ಆಟೋ ಚಾಲಕರಿಗೆ ಶಾಕ್: ಆಟೋ ಗ್ಯಾಸ್ ದರವೂ ಏರಿಕೆ

ಬೆಂಗಳೂರು: ವಾಣಿಜ್ಯ ಸಿಲಿಂಡರ್ ಗಳ ಬೆಲೆ ಏರಿಕೆ ಬೆನ್ನಲ್ಲೇ ಆಟೋ ಎಲ್.ಪಿ.ಜಿ. ದರವನ್ನು ಕೆಜಿಗೆ 5.73 ರೂ. ಹೆಚ್ಚಳ ಮಾಡಲಾಗಿದ್ದು, ಆಟೋ ಚಾಲಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರಣ ಆಟೋ ಎಲ್.ಪಿ.ಜಿ. ಕೊರತೆ ಉಂಟಾಗಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ಆಟೋ ಎಲ್.ಪಿ.ಜಿ. ದರ ಕೆಜಿಗೆ 5.73 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪ್ರತಿ ಕೆಜಿ ಆಟೋ ಎಲ್.ಪಿ.ಜಿ. ದರ 89.35 ರೂ.ನಿಂದ 95.08 ರೂ.ವರೆಗೆ ಏರಿಕೆಯಾಗಿದೆ. ಬೆಲೆ ಏರಿಕೆಯ ವಿರುದ್ಧ ಚಾಲಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಬೆಲೆ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಖಾಸಗಿ ಎಲ್.ಪಿ.ಜಿ. ಬಂಕ್ ಗಳಲ್ಲಿ ದರ ಏರಿಕೆ ಒಂದೇ ರೀತಿ ಇರುವುದಿಲ್ಲ. ಒಂದೊಂದು ಬಂಕ್ ಗಳಲ್ಲಿ ದರ ವ್ಯತ್ಯಾಸ ಇದ್ದು, ಇದು ಚಾಲಕರಲ್ಲಿ ಗೊಂದಲ ಮೂಡಿಸಿದೆ. ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆಟೋ ಎಲ್ಪಿಜಿ (Auto LPG) ದರದಲ್ಲಿ ಭಾರಿ ಏರಿಕೆಯಾಗಿದ್ದು, ಆಟೋ ಚಾಲಕರಿಗೆ ದೊಡ್ಡ ಶಾಕ್ ಎದುರಾಗಿದೆ.

ಬೆಲೆ ಏರಿಕೆಯ ಪ್ರಮುಖಾಂಶಗಳು:

ದರ ಏರಿಕೆ: ಈ ಹಿಂದೆ ಇದ್ದ 89 ರೂ. ಆಟೋ ಗ್ಯಾಸ್ ದರ, ಈಗ ಲೀಟರ್‌ಗೆ ಸುಮಾರು ₹95.08 ರಿಂದ ₹95.24 ರಷ್ಟು ಹೆಚ್ಚಳವಾಗಿದೆ.

ಖಾಸಗಿ ಬಂಕ್‌ ಗಳಲ್ಲಿ ಹೆಚ್ಚಿನ ದರ: ಕೆಲವು ಖಾಸಗಿ ಬಂಕ್‌ಗಳಲ್ಲಿ ಗ್ಯಾಸ್ ದರ ₹100 ರಿಂದ ₹120 ರಷ್ಟು ದುಬಾರಿಯಾಗಿದೆ.

ಬೆಲೆ ಏರಿಕೆ ಕಾರಣ: ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಾಸ ಮತ್ತು ಆಮದು ವೆಚ್ಚ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆಯಾಗಿದೆ.

ಚಾಲಕರ ಸಂಕಷ್ಟ: ಇದ್ದಕ್ಕಿದ್ದಂತೆ ಗ್ಯಾಸ್ ದರ ಹೆಚ್ಚಳವಾಗಿರುವುದರಿಂದ ದೈನಂದಿನ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಕೊರತೆ: ದರ ಏರಿಕೆಯ ಜೊತೆಗೆ, ಅನೇಕ ಬಂಕ್‌ಗಳಲ್ಲಿ ಗ್ಯಾಸ್ ಕೊರತೆ ಇರುವುದರಿಂದ ಚಾಲಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವಂತಾಗಿದೆ.ಈ ದಿಢೀರ್ ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರ ಬದುಕು ಅಯೋಮಯವಾಗಿದೆ ಮತ್ತು ಪ್ರಯಾಣಿಕರ ಮೇಲೂ ಇದರ ಪರಿಣಾಮ ಬೀರಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular