HomeKarnatakaರಾಜ್ಯಾದ್ಯಂತ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹ: 4.45 ಲಕ್ಷ ಹೆಕ್ಟೇರ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು

ರಾಜ್ಯಾದ್ಯಂತ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹ: 4.45 ಲಕ್ಷ ಹೆಕ್ಟೇರ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು

ರಾಜ್ಯಾದ್ಯಂತ ಇರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ಇಲಾಖೆಯ ವ್ಯಾಪ್ತಿಯಲ್ಲಿರುವ 𝟯,𝟳𝟴𝟴 ಕೆರೆಗಳ ಮೂಲಕ ಸುಮಾರು 𝟰,𝟰𝟱,𝟬𝟬𝟵 ಹೆಕ್ಟೇರ್‌ಗಳಷ್ಟು ಬೃಹತ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ (𝗖𝗼𝗺𝗺𝗮𝗻𝗱 𝗔𝗿𝗲𝗮) ಜೀವಜಲ ಒದಗಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 145 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳ ಮೂಲಕ 1,073 ಕೆರೆಗಳನ್ನು ತುಂಬಿಸಲಾಗುತ್ತಿದೆ. ಉತ್ತಮ ಮುಂಗಾರು ಮಳೆ ಹಾಗೂ ಸರ್ಕಾರದ ಜಲ ನಿರ್ವಹಣಾ ಕಾರ್ಯತಂತ್ರಗಳು ಈ ಉತ್ತಮ ನೀರಿನ ಮಟ್ಟಕ್ಕೆ ಕಾರಣವಾಗಿದೆ.

ಅಂಕಿ-ಅಂಶಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

•ರಾಜ್ಯದಲ್ಲಿರುವ ಒಟ್ಟು ಸಣ್ಣ ನೀರಾವರಿ ಕೆರೆಗಳು: 𝟯,𝟳𝟴𝟴

•ಕೆರೆಗಳಲ್ಲಿರುವ ಒಟ್ಟು ನೀರಿನ ಸಂಗ್ರಹ: 𝟱𝟬.𝟵𝟳 𝗧𝗠𝗖

•ಸಂಪೂರ್ಣ ಭರ್ತಿಯಾಗಿರುವ ಕೆರೆಗಳು: 𝟭𝟲𝟱

•ಶೇ. 𝟱0 ಕ್ಕೂ ಹೆಚ್ಚು ಭರ್ತಿಯಾಗಿರುವ ಕೆರೆಗಳು: 𝟭,𝟯𝟱𝟱

•ಪ್ರಯೋಜನ ಪಡೆಯುತ್ತಿರುವ ಒಟ್ಟು ಅಚ್ಚುಕಟ್ಟು ಪ್ರದೇಶ: 𝟰,𝟰𝟱,𝟬𝟬𝟵 ಹೆಕ್ಟೇರ್

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular