HomeKarnatakaಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಮಡಗಾಂವ್ ನಡುವೆ ವೇಗದೂತ ಬಸ್ ಸಂಚಾರ

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಮಡಗಾಂವ್ ನಡುವೆ ವೇಗದೂತ ಬಸ್ ಸಂಚಾರ

ಹುಬ್ಬಳ್ಳಿ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ – ಮಡಗಾಂವ್​ ನಡುವೆ ಎರಡು ವೇಗದೂತ ಬಸ್​ಗಳ ಸಂಚಾರವನ್ನು ಆರಂಭಿಸಿದೆ.

ಬೇಸಿಗೆ ರಜೀ ಇರುವುದರಿಂದ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಂದ ನೆರೆಯ ಗೋವಾ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಗಿ ಬರುತ್ತಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವ ಜನರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ ಹಾಗೂ ಗೋವಾದ ಮಡಗಾಂವ್​ ನಡುವೆ 2 ವೇಗದೂತ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ.

ಬಸ್ಸುಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಅಳ್ನಾವರ, ರಾಮನಗರ, ಪೊಂಡಾ ಮಾರ್ಗವಾಗಿ ಸಂಚರಿಸುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್​ಗಳ ವೇಳಾಪಟ್ಟಿ:
ಹುಬ್ಬಳ್ಳಿ-ಮಡಗಾಂವ್ ಬಸ್​ – ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 6-30, ಹಾಗೂ 10-30ಕ್ಕೆ ಹೊರಡುತ್ತದೆ.

ಮಡಗಾಂವ್​ ಗೆ ಬೆಳಗ್ಗೆ 11-15 ಹಾಗೂ ಮಧ್ಯಾಹ್ನ 3-15ಕ್ಕೆ ತಲುಪುತ್ತವೆ.

ಮಡಗಾಂವ್​ – ಹುಬ್ಬಳ್ಳಿ – ಮಡಗಾಂವ್​ ಬಸ್ ನಿಲ್ದಾಣದಿಂದ ಬೆಳಗ್ಗೆ 11-45 ಹಾಗೂ ಸಂಜೆ 4-15ಕ್ಕೆ ಹೊರಡುತ್ತವೆ. ಹುಬ್ಬಳ್ಳಿಗೆ ಸಂಜೆ 4-45 ಹಾಗೂ ರಾತ್ರಿ 9-00ಕ್ಕೆ ಆಗಮಿಸುತ್ತವೆ.

ಟಿಕೆಟ್ ದರ ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ರೂ. 229 ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular