ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಹೆಚ್.ಎಸ್.ಆರ್ ಲೇಔಟ್ನಲ್ಲಿ ನಡೆದಿದೆ.
ನಡೆದಿದ್ದೇನು?
ಸರ್ಜಾಪುರ ಮೂಲದ ಪುನೀತ್ ಎಂಬುವವರು ಚಿನ್ನ ಖರೀದಿಸಲು ಯೋಜಿಸಿದ್ದರು. ಈ ವೇಳೆ ಅವರ ಸಂಬಂಧಿ ಸವಿತಾ ರೆಡ್ಡಿ ಎಂಬಾಕೆ, ಹೆಚ್.ಎಸ್.ಆರ್ ಲೇಔಟ್ನಲ್ಲಿರುವ ‘ಎಂಪಿ ಚಿನ್ನದ ಮಳಿಗೆ’ಯಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಮತ್ತು ವೇಸ್ಟೇಜ್ ಚಾರ್ಜ್ (ಸೇತುವಾರಿ) ಕೂಡ ತುಂಬಾ ಕಡಿಮೆ ಇರುತ್ತದೆ ಎಂದು ನಂಬಿಸಿದ್ದಾಳೆ. ಎಂಪಿ ಚಿನ್ನದ ಅಂಗಡಿ ಮಾಲೀಕ ಇಂದರ್ ಚಂದ್ ಜೊತೆ ಸೇರಿ ಮಹಿಳೆ ಈ ಕೃತ್ಯ ಎಸಗಿದ್ದಾರೆ.ಸಂಬಂಧಿಯ ಮಾತು ನಂಬಿದ ಪುನೀತ್ ಹೂಡಿಕೆ ಮಾಡಲು ಮುಂದಾಗಿದ್ದಾರೆ.ಎಂಪಿ ಚಿನ್ನದ ಅಂಗಡಿ ಮಾಲೀಕ ಇಂದರ್ ಚಂದ್ ಜೊತೆ ಸೇರಿ ಮಹಿಳೆ ಈ ಕೃತ್ಯ ಎಸಗಿದ್ದಾರೆ.
ಮಾದರಿ ತೋರಿಸಿ ನಂಬಿಕೆ: ವಂಚಕರು ಮೊದಲು ಪುನೀತ್ಗೆ ಅಸಲಿ ಚಿನ್ನದ ಸಣ್ಣ ಮಾದರಿಯನ್ನು (Sample) ತೋರಿಸಿ, ಇದು ಅಸಲಿ ಎಂದು ಖಚಿತಪಡಿಸಿದ್ದರು.
ಸ್ಯಾಂಪಲ್ ನೋಡಿ ನಂಬಿದ ಪುನೀತ್ ದೊಡ್ಡ ಮೊತ್ತದ ಹಣದೊಂದಿಗೆ ಬಂದಾಗ, ವಂಚಕರು ಹಣವನ್ನು ಪಡೆದು ಪರಾರಿಯಾಗಿದ್ದಾರೆ. ಈ ವೇಳೆ ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ ಅಥವಾ ಬೆದರಿಕೆ ಹಾಕಿ ಹಣ ದೋಚುವ ತಂತ್ರ ಅನುಸರಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪೊಲೀಸರ ಎಚ್ಚರಿಕೆ
ಸಾರ್ವಜನಿಕರು ಅಪರಿಚಿತರು ಅಥವಾ ನಂಬಿಕಸ್ಥರೇ ಆದರೂ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ನೀಡುತ್ತೇವೆ ಎಂಬ ಆಮಿಷ ಒಡ್ಡಿದರೆ ಎಚ್ಚರದಿಂದಿರಬೇಕು. “ನಿಧಿ ಸಿಕ್ಕಿದೆ” ಅಥವಾ “ತುರ್ತು ಹಣದ ಅವಶ್ಯಕತೆಯಿದೆ ಹಾಗಾಗಿ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ” ಎನ್ನುವ ಮಾತುಗಳಿಗೆ ಮರುಳಾಗದೆ, ಅಧಿಕೃತ ಜ್ಯುವೆಲ್ಲರಿ ಮಳಿಗೆಗಳಲ್ಲಿ ಮಾತ್ರ ವ್ಯವಹಾರ ಮಾಡುವುದು ಸೂಕ್ತ ಎಂದು ಪೊಲೀಸರು ತಿಳಿಸಿದ್ದಾರೆ.

