ಶಿವಮೊಗ್ಗ: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಯುವತಿಯರಿಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ಪೊಲೀಸರು ಅಭಿನಂದಿಸಿದ್ದಾರೆ.
ದಿನಾಂಕ 16-04-2026 ರಂದು ಗಾಯತ್ರಿ ಎಂಬ ಗ್ರಾಹಕರೊಬ್ಬರು ದುರ್ಗಿಗುಡಿ ನ್ಯೂ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಮರೆತು ಬಿಟ್ಟು ಹೋದ ವ್ಯಾನಿಟಿ ಬ್ಯಾಗ್ ಅನ್ನು ಅಂಗಡಿಯಲ್ಲಿ ಕೆಲಸ ಮಾಡುವ ಸ್ವಾತಿ ಮತ್ತು ಸಂಗೀತ ಅವರು, ಮಾಲೀಕ ಮಾರ್ತಾಂಡ ಅವರಿಗೆ ಕೊಟ್ಟಿದ್ದಾರೆ.
ದಿನಾಂಕ: 21-04-2026 ರಂದು ಅವರು ಸದರಿ ಬ್ಯಾಗ್ ಅನ್ನು ಜಯನಗರ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿ, ಪೊಲೀಸ್ ನಿರೀಕ್ಷಕರ ಸಮಕ್ಷಮ ವ್ಯಾನಿಟಿ ಬ್ಯಾಗ್ ನ ಮಾಲೀಕರಿಗೆ ಮರಳಿ ಕೊಟ್ಟಿದ್ದು, ಬ್ಯಾಗ್ ನಲ್ಲಿ ಸುಮಾರು 5,00,000 ರೂ. ಬೆಲೆ ಬಾಳುವ ಬಂಗಾರ ಮತ್ತು ಇತರೆ ವಸ್ತುಗಳಿರುತ್ತವೆ.
ಬ್ಯಾಗ್ ಅನ್ನು ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದ ಸ್ವಾತಿ ಮತ್ತು ಸಂಗೀತ ಹಾಗೂ ಮಾರ್ತಾಂಡ ಅವರಿಗೆ ಜಯನಗರ ಪೊಲೀಸ್ ಠಾಣೆಯಲ್ಲಿ, ಸನ್ಮಾನಿಸಿ ಅಭಿನಂದಿಸಲಾಗಿದೆ.

