HomeLifestyleಥೈಲ್ಯಾಂಡ್ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗನಿಗೆ ಅವಮಾನ: 'ಇಂಡಿಯನ್' ಎಂದು ತಿಳಿಯುತ್ತಿದ್ದಂತೆ ಸಿಟ್ಟಾದ ಮ್ಯಾನೇಜರ್

ಥೈಲ್ಯಾಂಡ್ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗನಿಗೆ ಅವಮಾನ: ‘ಇಂಡಿಯನ್’ ಎಂದು ತಿಳಿಯುತ್ತಿದ್ದಂತೆ ಸಿಟ್ಟಾದ ಮ್ಯಾನೇಜರ್

ವಿದೇಶಿ ಪ್ರವಾಸಕ್ಕೆ ಹೋದಾಗ ಅಲ್ಲಿನ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಆನಂದಿಸಬೇಕು ಎಂಬುದು ಪ್ರತಿಯೊಬ್ಬ ಪ್ರವಾಸಿಗನ ಆಸೆ. ಆದರೆ ಥೈಲ್ಯಾಂಡ್‌ಗೆ ಭೇಟಿ ನೀಡಿದ್ದ ಭಾರತೀಯ ಪ್ರವಾಸಿಗರೊಬ್ಬರಿಗೆ ಅಲ್ಲಿನ ಹೋಟೆಲ್ ಮ್ಯಾನೇಜರ್ ಎಸಗಿದ ಜನಾಂಗೀಯ ನಿಂದನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಬಿಲ್ ವಿಚಾರವಾಗಿ ಶುರುವಾದ ಕಿರಿಕ್ ಇನ್‌ಸ್ಟಾಗ್ರಾಮ್ ಬಳಕೆದಾರ @semicolonsandsuitcases ಅವರು ಹಂಚಿಕೊಂಡಿರುವ ವಿಡಿಯೋ ಪ್ರಕಾರ, ಬೆಳಗಿನ ಉಪಾಹಾರದ ಬಿಲ್‌ನಲ್ಲಿ ಉಂಟಾದ ಸಣ್ಣ ಗೊಂದಲ ಈ ವಿವಾದಕ್ಕೆ ಮೂಲವಾಗಿದೆ. ಬಿಲ್ ಕುರಿತು ಚರ್ಚಿಸಲು ಹೋಟೆಲ್ ಸಿಬ್ಬಂದಿ ಭಾಷಾಂತರಕ್ಕಾಗಿ ಮಹಿಳಾ ಮ್ಯಾನೇಜರ್ ಒಬ್ಬರನ್ನು ಕರೆಸಿದ್ದಾರೆ. ಆ ಮಹಿಳೆ ಪ್ರವಾಸಿಗನ ದೇಶ ಯಾವುದು ಎಂದು ಕೇಳಿದಾಗ, ಅವರು ‘ಭಾರತ’ ಎಂದು ಉತ್ತರಿಸಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಆ ಮ್ಯಾನೇಜರ್ ಉರಿದುಬಿದ್ದು, “ಭಾರತೀಯರು ಯಾವಾಗಲೂ ಹೀಗೆ, ಅವರಿಗೆ ಬಿಲ್ ಪಾವತಿಸಲು ಇಷ್ಟವಿಲ್ಲ” ಎಂಬಂತೆ ಸಾರ್ವತ್ರಿಕವಾಗಿ ನಿಂದಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಪ್ರವಾಸಿಗನ ಸ್ಪಷ್ಟನೆ ಮತ್ತು ಪೊಲೀಸರ ಮಧ್ಯಪ್ರವೇಶ ಈ ಘಟನೆಯ ಬಗ್ಗೆ ವಿವರಿಸಿರುವ ಪ್ರವಾಸಿಗರು, “ನಾನು ಕಾಶ್ಮೀರದವನು, ನಾನೂ ಕೂಡ ಭಾರತದೊಳಗೆ ಕೆಲವೊಮ್ಮೆ ತಾರತಮ್ಯ ಅನುಭವಿಸಿದ್ದೇನೆ. ಆದರೆ ವಿದೇಶಕ್ಕೆ ಹೋದಾಗ ಕೇವಲ ರಾಷ್ಟ್ರೀಯತೆಯ ಕಾರಣಕ್ಕೆ ಇಡೀ ಗುಂಪನ್ನು ನಿಂದಿಸುವುದು ಸರಿಯಲ್ಲ. ಈ ವಿಷಯ ಹಣದ ಬಗ್ಗೆ ಇರಲಿಲ್ಲ, ಬದಲಾಗಿ ಆಕೆ ಮಾತನಾಡಿದ ರೀತಿ ಅಮಾನವೀಯವಾಗಿತ್ತು. ಕೊನೆಗೆ ನಾನು ಪ್ರವಾಸಿ ಪೊಲೀಸರಿಗೆ ಕರೆ ಮಾಡಬೇಕಾಯಿತು. ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು ಮತ್ತು ಹೋಟೆಲ್ ಮ್ಯಾನೇಜರ್ ಕ್ಷಮೆಯಾಚಿಸಿದರು” ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಟ್ಟಿಗರ ಪರ-ವಿರೋಧ ಚರ್ಚೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಭಾಗವಾಗಿದ್ದಾರೆ. ಕೆಲವರು ಭಾರತೀಯರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಮಹಿಳೆಯ ಕ್ರಮವನ್ನು ಖಂಡಿಸಿದರೆ, ಇನ್ನು ಕೆಲವರು “ಪ್ರವಾಸಿಗರೇನಾದರೂ ತಪ್ಪು ಮಾಡಿರಬಹುದು, ಅದಕ್ಕೆ ಆಕೆ ಹಾಗೆ ಪ್ರತಿಕ್ರಿಯಿಸಿದ್ದಾಳೆ” ಎಂದು ಕಾಮೆಂಟ್ ಮಾಡಿದ್ದಾರೆ. ಸ್ವತಃ ಭಾರತೀಯರೇ ತನ್ನ ವಿರುದ್ಧ ಕಾಮೆಂಟ್ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಪ್ರವಾಸಿಗರು ವಿಷಾದ ವ್ಯಕ್ತಪಡಿಸಿದ್ದಾರೆ. ಯಾವುದೇ ದೇಶ ಅಥವಾ ಸಂಸ್ಕೃತಿಯನ್ನು ಒಂದು ಸಣ್ಣ ಘಟನೆಯ ಆಧಾರದ ಮೇಲೆ ಅಳೆಯುವುದು ತಪ್ಪು ಎಂಬ ಸಂದೇಶ ಈ ಘಟನೆಯ ಮೂಲಕ ರವಾನೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular