ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 6 ) ಐಪಿಎಲ್ 2026ರ 12ನೇ ಲೀಗ್ ಪಂದ್ಯ ನಡೆಯುತ್ತಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆರಿಸಿಕೊಂಡರು. ಪಂಜಾಬ್ ಕಿಂಗ್ಸ್ ತಂಡದ ಕ್ಷೇವಿಯರ್ ಬಾರ್ಟ್ಲೆಟ್ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕೊಲ್ಕತ್ತಾದ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಕೆಕೆಆರ್‌ಗೆ ಆರಂಭಿಕ ಆಘಾತ ನೀಡಿದರು.
ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಫಿನ್ ಅಲೆನ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರೆ, ಬೆನ್ನಲ್ಲೇ ಕಣಕ್ಕಿಳಿದು ಓವರ್‌ನ ಐದನೇ ಎಸೆತಕ್ಕೆ ಬೌಂಡರಿ ಬಾರಿಸಿದ ಕೆಮರಾನ್ ಗ್ರೀನ್ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಸದ್ಯ ಕಣದಲ್ಲಿ ಅಜಿಂಕ್ಯ ರಹಾನೆ 8 ರನ್ ಹಾಗೂ ಅಂಗ್‌ಕ್ರಿಶ್ ರಘುವಂಶಿ ಅಜೇಯ 7 ರನ್ ಗಳಿಸಿ ಕಣದಲ್ಲಿದ್ದು, ಕೆಕೆಆರ್ 3.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದ್ದು, ಈ ಸಮಯಕ್ಕೆ ವರುಣನ ಆಗಮನವಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇನ್ನು ಆರಂಭದಲ್ಲಿ ತುಂತುರು ಹನಿಯೊಂದಿಗೆ ಶುರುವಾದ ಮಳೆ ರಾತ್ರಿ 9.30 ಆದರೂ ಮುಂದುವರಿದಿದ್ದು, ಪಂದ್ಯ ನಡೆಯಲಿದೆಯಾ ಎಂಬ ಅನುಮಾನ ಸದ್ಯ ನಿರ್ಮಾಣವಾಗಿದೆ. ಐದು ಓವರ್ ಪಂದ್ಯವಾದರೂ ನಡೆಯಲಿದೆಯಾ ಎಂಬ ಪ್ರಶ್ನೆಗೆ ಉತ್ತರ ಹೊರಬಿದ್ದಿದ್ದು, 5 ಓವರ್‌ಗಳ ಪಂದ್ಯ ನಡೆಸಲು ರಾತ್ರಿ 11.14 ಕಟ್‌ಆಫ್ ಸಮಯವಾಗಿ ಘೋಷಣೆಯಾಗಿದೆ. ಹೀಗಾಗಿ ಆದಷ್ಟು ಮಳೆ ನಿಂತು 11.14ಕ್ಕೆ ಪಂದ್ಯ ಆರಂಭವಾದರೆ ಮಾತ್ರ ಐದು ಓವರ್ ಪಂದ್ಯ ನಡೆಯಲಿದ್ದು, ಇಷ್ಟು ಗಂಟೆಗೆ ಪಿಚ್ ಸಿದ್ಧತೆ ಕಷ್ಟ ಎಂದು ತಿಳಿದುಬಂದರೆ ಪಂದ್ಯ ರದ್ದಾಗಲಿದೆ.

