ನವದೆಹಲಿ: ರೈಲು ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಎಂಟು ಗಂಟೆ ಮೊದಲು ರೈಲ್ವೆ ಟಿಕೆಟ್ ರದ್ದುಪಡಿಸಿದರೆ ಮರುಪಾವತಿ(ರೀಫಂಡ್) ಮಾಡುವುದಿಲ್ಲ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ.
ನಿಗದಿತ ನಿರ್ಗಮನ ಸಮಯದ ಎಂಟು ಗಂಟೆಯ ಒಳಗೆ ರೈಲ್ವೆ ಟಿಕೆಟ್ ರದ್ದಾದರೆ ಯಾವುದೇ ಮರುಪಾವತಿ ಇರುವುದಿಲ್ಲ. ಅದೇ ರೀತಿ ರೈಲು ಹೊರಡುವ 24 ಗಂಟೆಗಳಿಂದ 8 ಗಂಟೆಗಳ ಮೊದಲು ಟಿಕೆಟ್ ರದ್ದಾದಲ್ಲಿ ಟಿಕೆಟ್ ದರದ ಶೇಕಡ 50ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುವುದು.
ಅದೇ ರೀತಿ 24 ರಿಂದ 72 ಗಂಟೆಯ ಮೊದಲು ಟಿಕೆಟ್ ರದ್ದುಗೊಳಿಸಿದರೆ ಶೇಕಡ 25 ರಷ್ಟು ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

