HomeKarnatakaಯುದ್ಧ ಹಿನ್ನೆಲೆ ಐದು ಬಾರಿ ಯೋಚಿಸಿ ಅಡುಗೆ ಅನಿಲ ಮಿತವಾಗಿ ಬಳಸಿ: ಸಿದ್ದಗಂಗಾ ಸ್ವಾಮೀಜಿ ಕರೆ

ಯುದ್ಧ ಹಿನ್ನೆಲೆ ಐದು ಬಾರಿ ಯೋಚಿಸಿ ಅಡುಗೆ ಅನಿಲ ಮಿತವಾಗಿ ಬಳಸಿ: ಸಿದ್ದಗಂಗಾ ಸ್ವಾಮೀಜಿ ಕರೆ

ತುಮಕೂರು: ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಅಡುಗೆ ಅನಿಲ ಮಿತವಾಗಿ ಬಳಸುವಂತೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಳಿ ಇರುವುದನ್ನು ಸುಮ್ಮನೆ ಖರ್ಚು ಮಾಡಬೇಡಿ. ಐದು ಬಾರಿ ಯೋಚಿಸಿ ಬಳಸಿ ಎಂದು ಜನತೆಗೆ ಕಿವಿಮಾತು ಹೇಳಿದ್ದಾರೆ.

ನೀರು, ವಿದ್ಯುತ್, ಗ್ಯಾಸ್ ಅಮೂಲ್ಯವಾದದ್ದು. ನಮಗೆ ಸಿಕ್ಕಿದ್ದು ಇನ್ನೊಬ್ಬರಿಗೂ ಸಿಗಲಿ ಎನ್ನುವ ಉದಾರತೆ ಇರಲಿ. ಪ್ರತಿಯೊಂದು ವಸ್ತುವನ್ನು ಖರ್ಚು ಮಾಡುವಾಗ ಐದು ಬಾರಿ ಯೋಚಿಸಬೇಕು. ನಮ್ಮ ಬಳಿ ಹೆಚ್ಚಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕೊರತೆ ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಕೆ ಮಾಡಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಠದಲ್ಲಿ ಸೌದೆ, ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಚಪಾತಿ ಮಾಡಲು ಅನಿವಾರ್ಯ ಸಂದರ್ಭಗಳಲ್ಲಿ ಗ್ಯಾಸ್ ಬಳಸಲಾಗುವುದು. ಮುಂದಿನ ದಿನಗಳಲ್ಲಿ ಗೋಬರ್ ಗ್ಯಾಸ್ ಪ್ಲಾಂಟ್ ಅಳವಡಿಸುವ ಆಲೋಚನೆ ಇದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular