2026ರ ಏಪ್ರಿಲ್ ತಿಂಗಳು ಆರಂಭವಾಗುತ್ತಿದ್ದು, ಬ್ಯಾಂಕ್ ಕೆಲಸಗಳಿರುವವರು ರಜಾ ದಿನಗಳ ಪಟ್ಟಿಯನ್ನು ಒಮ್ಮೆ ಗಮನಿಸುವುದು ಉತ್ತಮ. ಆರ್‌ಬಿಐ (RBI) ಕ್ಯಾಲೆಂಡರ್ ಪ್ರಕಾರ, ಏಪ್ರಿಲ್‌ನಲ್ಲಿ ಒಟ್ಟು 11 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ.
ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಹಬ್ಬಗಳ ಅಬ್ಬರ ತುಸು ಕಡಿಮೆ ಎನ್ನಬಹುದು. ಕ್ರೈಸ್ತರ ಪವಿತ್ರ ದಿನಗಳಾದ ಗುಡ್ ಫ್ರೈಡೆ ಮತ್ತು ಈಸ್ಟರ್ ಈ ತಿಂಗಳಲ್ಲೇ ಬರಲಿವೆ. ಆದರೆ, ಈಸ್ಟರ್ ಭಾನುವಾರ ಬಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಕೈತಪ್ಪಿದಂತಾಗಿದೆ. ಇನ್ನುಳಿದಂತೆ ಅಂಬೇಡ್ಕರ್ ಜಯಂತಿ ಹಾಗೂ ಬಸವ ಜಯಂತಿ ಪ್ರಯುಕ್ತ ಬ್ಯಾಂಕುಗಳು ಮುಚ್ಚಲಿವೆ.
ನಾಲ್ಕು ಭಾನುವಾರ ಹಾಗೂ ಎರಡು ಶನಿವಾರಗಳ ರಜೆ ಸೇರಿದಂತೆ ಒಟ್ಟು 11 ದಿನಗಳ ಕಾಲ ವಹಿವಾಟು ಇರುವುದಿಲ್ಲ. ಲೋನ್ ಕೆಲಸಗಳು ಅಥವಾ ಇತರ ತುರ್ತು ಬ್ಯಾಂಕಿಂಗ್ ಕಾರ್ಯಗಳಿಗಾಗಿ ಕಚೇರಿಗೆ ಅಲೆಯುವವರು ಈ ರಜಾ ಪಟ್ಟಿಯನ್ನು ನೋಡಿ ತಮ್ಮ ಕೆಲಸಗಳನ್ನು ಪ್ಲಾನ್ ಮಾಡಿಕೊಳ್ಳುವುದು ಅನಿವಾರ್ಯ. ಸತತ ಕೆಲಸದ ನಡುವೆ ವಿಶ್ರಾಂತಿ ಬಯಸುವ ನೌಕರರಿಗೆ ಹಾಗೂ ರಜೆಯ ಮಜಾ ಸವಿಯುವ ಮಕ್ಕಳಿಗೆ ಏಪ್ರಿಲ್ ತಿಂಗಳು ಹೊಸ ನಿರೀಕ್ಷೆಗಳನ್ನು ಹೊತ್ತು ತಂದಿದೆ.
ಏಪ್ರಿಲ್ 2026 ರ ಬ್ಯಾಂಕ್ ರಜಾ ದಿನಗಳು
ಏಪ್ರಿಲ್ 3 (ಶುಕ್ರವಾರ)- ಗುಡ್ ಫ್ರೈಡೆ
ಏಪ್ರಿಲ್ 5 -ಭಾನುವಾರ
ಏಪ್ರಿಲ್ 11- ಎರಡನೇ ಶನಿವಾರ
ಏಪ್ರಿಲ್ 12-ಭಾನುವಾರ
ಏಪ್ರಿಲ್ 14 (ಮಂಗಳವಾರ)-ಡಾ.ಅಂಬೇಡ್ಕರ್ ಜಯಂತಿ
ಏಪ್ರಿಲ್ 19 – ಭಾನುವಾರ
ಏಪ್ರಿಲ್ 20 (ಸೋಮವಾರ)- ಬಸವ ಜಯಂತಿ
ಏಪ್ರಿಲ್ 25-ನಾಲ್ಕನೇ ಶನಿವಾರ
ಏಪ್ರಿಲ್ 26-ಭಾನುವಾರ
ಕರ್ನಾಟಕದಲ್ಲಿ ಏಪ್ರಿಲ್ ಬ್ಯಾಂಕ್ ರಜೆಗಳ ಸಂಪೂರ್ಣ ವಿವರ:
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ಬ್ಯಾಂಕ್ ಗ್ರಾಹಕರಿಗೆ ಒಟ್ಟು 10 ದಿನಗಳ ಕಾಲ ರಜೆ ಇರಲಿದೆ. ರಾಜ್ಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾದ ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿ ಪ್ರಯುಕ್ತ ಬ್ಯಾಂಕುಗಳು ಅಧಿಕೃತವಾಗಿ ಬಾಗಿಲು ಮುಚ್ಚಲಿವೆ.
ಕೇವಲ ಹಬ್ಬಗಳಷ್ಟೇ ಅಲ್ಲದೆ, ತಿಂಗಳ ನಾಲ್ಕು ಭಾನುವಾರಗಳು ಹಾಗೂ ಎರಡು ಶನಿವಾರಗಳ (ಎರಡನೇ ಮತ್ತು ನಾಲ್ಕನೇ ಶನಿವಾರ) ರಜೆಯೂ ಇದರಲ್ಲಿ ಸೇರಿದೆ. ಹೀಗಾಗಿ, ಬ್ಯಾಂಕಿಂಗ್ ಕೆಲಸಗಳಿರುವವರು ಈ ರಜಾ ದಿನಗಳನ್ನು ಮೊದಲೇ ತಿಳಿದುಕೊಂಡು ತಮ್ಮ ವ್ಯವಹಾರಗಳನ್ನು ಯೋಜಿಸುವುದು ಉತ್ತಮ. ಹಣಕಾಸಿನ ವಹಿವಾಟು ಅಥವಾ ಬ್ಯಾಂಕ್ ಭೇಟಿಗೂ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ
ಕರ್ನಾಟಕದಲ್ಲಿ ಏಪ್ರಿಲ್‌ನಲ್ಲಿ ಬ್ಯಾಂಕ್ ರಜಾದಿನಗಳು
ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್
ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ರಜೆ
ಏಪ್ರಿಲ್ 5: ಭಾನುವಾರದ ರಜೆ
ಏಪ್ರಿಲ್ 11: ಎರಡನೇ ಶನಿವಾರದ ರಜೆ
ಏಪ್ರಿಲ್ 12: ಭಾನುವಾರದ ರಜೆ
ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
ಏಪ್ರಿಲ್ 19: ಭಾನುವಾರದ ರಜೆ
ಏಪ್ರಿಲ್ 20, ಸೋಮವಾರ: ಬಸವ ಜಯಂತಿ
ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
ಏಪ್ರಿಲ್ 26: ಭಾನುವಾರದ ರಜೆ

