HomeLatest News30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವಿಡಿಯೋ ಲೀಕ್ ಬಳಿಕ ಬಿಜೆಪಿ ಕೌನ್ಸಿಲರ್...

30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವಿಡಿಯೋ ಲೀಕ್ ಬಳಿಕ ಬಿಜೆಪಿ ಕೌನ್ಸಿಲರ್ ಪುತ್ರ ಬಂಧನ

ಗೋವಾ: ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಪೆನ್ ಡ್ರೈವ್ ಪ್ರಕರಣದ ಮಾದರಿಯಲ್ಲೇ ಗೋವಾದಲ್ಲೂ ಅತಿ ಭೀಕರ ಲೈಂಗಿಕ ಹಗರಣವೊಂದು ಬಯಲಿಗೆ ಬಂದಿದೆ. ಸುಮಾರು 30ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ನಂಬಿಸಿ, ಅತ್ಯಾಚಾರ ಎಸಗಿ, ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾಮುಕ ಸೋಹಮ್ ಸುಶಾಂತ್ ನಾಯಕ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರಗಳು:

ಕಾಮುಕನ ಹಿನ್ನೆಲೆ: ಈತ ದಕ್ಷಿಣ ಗೋವಾದ ಬಿಜೆಪಿ ಮುನ್ಸಿಪಲ್ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಪುತ್ರ. ಕಳೆದ ಮೂರು ವರ್ಷಗಳಿಂದ ಈತ ವ್ಯವಸ್ಥಿತವಾಗಿ ಶಾಲಾ ಬಾಲಕಿಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋ ಲೀಕ್ ಆಗಿದ್ದು ಹೇಗೆ?: ಈ ಕಾಮುಕ ಕಳೆದ ವಾರ ಮದ್ಯದ ನಶೆಯಲ್ಲಿದ್ದಾಗ ತನ್ನ ವಿಕೃತ ಕೃತ್ಯದ ವಿಡಿಯೋಗಳನ್ನು ಗೆಳೆಯರಿಗೆ ವಾಟ್ಸಾಪ್ ಮೂಲಕ ಫಾರ್ವರ್ಡ್ ಮಾಡಿದ್ದ. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಇಡೀ ಗೋವಾ ಸ್ತಬ್ಧವಾಗಿದೆ.

ಬ್ಲ್ಯಾಕ್‌ಮೇಲ್ ತಂತ್ರ: ಬಾಲಕಿಯರನ್ನು ಬೆದರಿಸಿ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಈತ, ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಯಾರಾದರೂ ಬಾಯಿ ಬಿಟ್ಟರೆ ಲೀಕ್ ಮಾಡುವುದಾಗಿ ಬೆದರಿಸುತ್ತಿದ್ದ. ಈ ಕಾರಣಕ್ಕೆ ಸಂತ್ರಸ್ತರು ಕಳೆದ 3 ವರ್ಷಗಳಿಂದ ಮೌನವಾಗಿದ್ದರು.

https://www.instagram.com/reel/DWVwZjWE_ZH/?utm_source=ig_web_copy_link&igsh=MzRlODBiNWFlZA==

ತನಿಖೆಯಲ್ಲಿ ಬಯಲಾದ ಸತ್ಯ: ಪೊಲೀಸರು ಈತನ ಮೊಬೈಲ್ ವಶಪಡಿಸಿಕೊಂಡಾಗ 25 ರಿಂದ 30 ಬಾಲಕಿಯರ ಮೇಲಿನ ದೌರ್ಜನ್ಯದ ವಿಡಿಯೋಗಳು ಲಭ್ಯವಾಗಿವೆ. ಈಗಾಗಲೇ ಮೂವರು ಸಂತ್ರಸ್ತ ಬಾಲಕಿಯರು ಧೈರ್ಯ ಮಾಡಿ ದೂರು ನೀಡಲು ಮುಂದೆ ಬಂದಿದ್ದಾರೆ.

ಜನಾಕ್ರೋಶ ಮತ್ತು ಪ್ರತಿಭಟನೆ:
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಗೋವಾದ ಕರ್ಚೋರೆಮ್ ಪೊಲೀಸ್ ಠಾಣೆ ಮುಂದೆ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ನಡೆಸಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ.

ಸದ್ಯ ಆರೋಪಿ ಸೋಹಮ್ ನಾಯಕ್ ಮೇಲೆ ಪೋಕ್ಸೋ (POCSO) ಮತ್ತು ಗೋವಾ ಚಿಲ್ಡ್ರನ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆಯನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular