ಬೆಂಗಳೂರು: ಜಾಗತಿಕ ರಾಜಕೀಯ ವಿದ್ಯಮಾನಗಳು ಹಳದಿ ಲೋಹದ ಮೇಲೆ ಭಾರಿ ಪ್ರಭಾವ ಬೀರುತ್ತಿವೆ. ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಂದು ರಾಕೆಟ್ ವೇಗದಲ್ಲಿ ಏರಿಕೆಯಾಗಿದೆ. ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದ್ದು, ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬಂದಿದೆ.
ಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಭೀತಿ ಹಾಗೂ ಜಾಗತಿಕ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (COMEX) ಚಿನ್ನದ ಬೆಲೆ ಔನ್ಸ್ಗೆ 4,600 ಡಾಲರ್ ತಲುಪಿದೆ.
ಮಾರ್ಚ್ 26, 2026ರ ಮಾರುಕಟ್ಟೆ ರಿಪೋರ್ಟ್:
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಏರಿಕೆಯಾಗಿದ್ದು, ಒಟ್ಟು ಬೆಲೆ 1,46,890 ರೂ. ತಲುಪಿದೆ. (ಪ್ರತಿ ಗ್ರಾಂಗೆ 22 ರೂ. ಹೆಚ್ಚಳವಾಗಿ 14,689 ರೂ. ದಾಖಲಾಗಿದೆ).
ಬೆಳ್ಳಿಯ ಬೆಲೆ: ಬೆಳ್ಳಿ ದರ ಇಂದು ಕೆಜಿಗೆ 100 ರೂ. ಏರಿಕೆಯಾಗಿದ್ದು, ಸದ್ಯ 2,50,100 ರೂ. ಗೆ ತಲುಪಿದೆ. ಕಳೆದ ವಾರವಷ್ಟೇ ಬೆಳ್ಳಿ ಬೆಲೆ ಬರೋಬ್ಬರಿ 80 ಸಾವಿರದಷ್ಟು ಭಾರಿ ಕುಸಿತ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಲೆ ಏರಿಕೆಗೆ ಅಸಲಿ ಕಾರಣವೇನು?:
ಯುದ್ಧದ ಭೀತಿ: ಇರಾನ್-ಅಮೆರಿಕಾ ಮತ್ತು ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ಅನಿಶ್ಚಿತತೆ ಸೃಷ್ಟಿಸಿದೆ.
ಸುರಕ್ಷಿತ ಹೂಡಿಕೆ: ಡಾಲರ್ ಮೌಲ್ಯದ ಏರಿಳಿತದ ನಡುವೆ ವಿದೇಶಿ ಹೂಡಿಕೆದಾರರಿಗೆ ಈಗ ಚಿನ್ನವೇ ಅತ್ಯಂತ ನೆಚ್ಚಿನ ಮತ್ತು ಸುರಕ್ಷಿತ ಹೂಡಿಕೆಯಾಗಿದೆ.
ಕಚ್ಚಾ ತೈಲ ಎಫೆಕ್ಟ್: ಅಮೆರಿಕಾದ ಕದನ ವಿರಾಮದ ಮಾತುಕತೆಯಿಂದ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು, ಇದು ಪರೋಕ್ಷವಾಗಿ ಚಿನ್ನದ ದರ ಏರಿಕೆಗೆ ಹಾದಿ ಮಾಡಿಕೊಟ್ಟಿದೆ.
ಆರ್ಥಿಕ ತಜ್ಞರ ಪ್ರಕಾರ ಚಿನ್ನದ ಬೆಲೆ ಏರಿಕೆ ಕಂಡರೂ ಹಳೆಯ ದಾಖಲೆಗಳನ್ನು (Record Highs) ಮುರಿಯುವುದು ಸದ್ಯಕ್ಕೆ ಅಸಾಧ್ಯ ಎನ್ನಲಾಗಿದೆ. ಆದರೆ, ಬೆಳ್ಳಿಯು ಕೇವಲ ಹೂಡಿಕೆಯಲ್ಲದೆ ಕೈಗಾರಿಕೆಗಳಿಗೂ ಹೆಚ್ಚಿನ ಬೇಡಿಕೆ ಇರುವುದರಿಂದ ಹೂಡಿಕೆದಾರರು ಒಂದೇ ಬಾರಿ ಹಣ ಹಾಕದೆ ಹಂತಹಂತವಾಗಿ ಹೂಡಿಕೆ ಮಾಡುವುದು ಜಾಣತನದ ಕ್ರಮ.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ (ನಗರವಾರು):
ಚೆನ್ನೈ – ₹14,913
ಮುಂಬೈ – ₹14,689
ದೆಹಲಿ – ₹14,704
ಕೊಲ್ಕತ್ತಾ – ₹14,689
ಬೆಂಗಳೂರು – ₹14,689
ಹೈದರಾಬಾದ್ – ₹14,689
ಕೇರಳ – ₹14,689
ಪುಣೆ – ₹14,689
ವಡೋದರಾ – ₹14,694
ಅಹಮದಾಬಾದ್ – ₹14,694

