HomeLatest Newsಪೋಕ್ಸೊ ಕೇಸ್‌ ಎದುರಿಸುತ್ತಿರುವ ಆರ್‌ಸಿಬಿ ಆಟಗಾರ ಟೂರ್ನಿಯಿಂದಲೇ ಔಟ್; ಬದಲಿ ಆಟಗಾರ ಯಾರು?

ಪೋಕ್ಸೊ ಕೇಸ್‌ ಎದುರಿಸುತ್ತಿರುವ ಆರ್‌ಸಿಬಿ ಆಟಗಾರ ಟೂರ್ನಿಯಿಂದಲೇ ಔಟ್; ಬದಲಿ ಆಟಗಾರ ಯಾರು?

ಬಹು ನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಬೃಹತ್ ಸಮರದ ಶುರುವಿಗೆ ಕೇವಲ ಮೂರು ದಿನಗಳು ಬಾಕಿ ಇದೆ. ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಹೀಗೆ ಟೂರ್ನಿ ಸಮೀಪಿಸುತ್ತಿದ್ದಂತೆ ಎಲ್ಲ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಹೋಮ್‌ಗ್ರೌಂಡ್‌ನಲ್ಲಿ ಒಟ್ಟುಗೂಡಿಸಿದ್ದು, ಆಟಗಾರರು ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಕೆಲ ಆಟಗಾರರು ಗಾಯದ ಸಮಸ್ಯೆಯಿಂದ ಇನ್ನೂ ಸಹ ಆಗಮಿಸದೇ ಇದ್ದರೆ, ಆರ್‌ಸಿಬಿಯ ವೇಗಿ ಯಶ್ ದಯಾಳ್ ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಟೂರ್ನಿಗೆ ಅಲಭ್ಯರಾಗಿದ್ದಾರೆ ಎಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ.

ಹೌದು, 2024ರಲ್ಲಿ ಆರ್‌ಸಿಬಿ ತಂಡ ಸೇರಿಕೊಂಡಿದ್ದ ಯಶ್ ದಯಾಳ್ ವಿರುದ್ಧ ಆರ್‌ಸಿಬಿ ಕಳೆದ ವರ್ಷ ಚಾಂಪಿಯನ್ ಆದ ಬಳಿಕ ಎರಡು ಪ್ರಕರಣಗಳು ದಾಖಲಾದವು. ಜೈಪುರದ ಯುವತಿಯೊಬ್ಬಳು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ತಾನು ಅಪ್ರಾಪ್ತಳಿದ್ದಾಗ ತನ್ನ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಪ್ರಕರಣ ದಾಖಲಿಸಿದ್ದ ಕಾರಣ ಯಶ್ ದಯಾಳ್ ವಿರುದ್ಧ ಪೋಕ್ಸೊ ದಾಖಲಾಗಿತ್ತು. ಬೆನ್ನಲ್ಲೇ ಮತ್ತೋರ್ವ ಯುವತಿ ಯಶ್ ದಯಾಳ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಗಾಜಿಯಾಬಾದ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗೆ ಎರಡು ಪ್ರಕರಣ ದಾಖಲಾದ ಬೆನ್ನಲ್ಲೇ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯಶ್ ದಯಾಳ್‌ಗೆ ದೇಶಿ ಕ್ರಿಕೆಟ್ ಆಡಲು ಅವಕಾಶ ನೀಡಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಇದೇ ಕಾರಣದಿಂದ ಯಶ್ ದಯಾಳ್ ಐಪಿಎಲ್‌ಗೂ ಸಹ ಅಲಭ್ಯರಾಗಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಯಶ್ ದಯಾಳ್ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಅವರಿಗೆ ಈವರೆಗೆ ಆರ್‌ಸಿಬಿ ಬೆಂಬಲ ನೀಡಿದೆ, ಅವರನ್ನು ಉಳಿಸಿಕೊಳ್ಳಲು ಬಯಸಿದ್ದು ಅವರು ಒಪ್ಪಂದದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದೆ. ಈ ಮೂಲಕ ಆರ್‌ಸಿಬಿ ಸದ್ಯಕ್ಕೆ ಯಾವುದೇ ಬದಲಿ ಆಟಗಾರನ ಕುರಿತು ಮಾಹಿತಿ ನೀಡದೇ ಇದ್ದು, ಯಶ್ ದಯಾಳ್ ಬದಲಿಗೆ ಬೇರೊಬ್ಬ ಆಟಗಾರನನ್ನು ನೇಮಿಸಿಕೊಳ್ಳುವುದು ಅನುಮಾನ ಮೂಡಿಸಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular