HomeLatest Newsಯುದ್ಧದ ಎಫೆಕ್ಟ್ : ಗ್ರಾಹಕರಿಗೆ ಬಿಗ್ ಶಾಕ್, ಬೈಕು- ಕಾರುಗಳ ಬೆಲೆ 15%-20 %...

ಯುದ್ಧದ ಎಫೆಕ್ಟ್ : ಗ್ರಾಹಕರಿಗೆ ಬಿಗ್ ಶಾಕ್, ಬೈಕು- ಕಾರುಗಳ ಬೆಲೆ 15%-20 % ಏರಿಕೆ ಸಾಧ್ಯತೆ.!

ಉಕ್ರೇನ್-ರಷ್ಯಾ ಯುದ್ಧದ ಪರಿಣಾಮ ವಾಹನಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌ ಸಿಗಲಿದೆ. ಆಮದು ಮಾಡಿಕೊಳ್ಳುವ ಬಿಡಿ ಭಾಗಗಳ ಬೆಲೆ ಏರಿಕೆಯಾಗಿರುವ ಕಾರಣ ವಾಹನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಹನ ಉದ್ಯಮದ ಮೂಲಗಳು ತಿಳಿಸಿವೆ.

ಹೌದು.  ಮುಂದಿನ ವಾರದಿಂದ ಅನ್ವಯವಾಗುವಂತೆ ಹೊಸ ಬೆಲೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ವಾಹನ ತಯಾರಿಕಾ ಸಂಸ್ಥೆಯೊಂದು ಮಾಹಿತಿ ನೀಡಿದೆ. ಈಗಾಗಲೇ ರಷ್ಯಾ ಉಕ್ರೇನ್ ಯುದ್ಧದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಜನರು ಆತಂಕದಲ್ಲಿದ್ದಾರೆ. ಇದರ ಜೊತೆಗೆ ಕಾರು- ಬೈಕುಗಳ ಬೆಲೆ ಶೇ 10-15 ರಷ್ಟು ಏರಿಕೆಯಾಗಲಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆಯಾಗಲಿದೆ.

ಯುದ್ಧದ ಪರಿಣಾಮ ಪೂರೈಕೆ ಕೊರತೆ ಎದುರಾಗಿದ್ದು, ಉತ್ಪಾದನಾ ವೆಚ್ಚವು ಹೆಚ್ಚಾಗಿದೆ. ಇದು ಭಾರತ ಸೇರಿದಂತೆ ಜಾಗತಿಕ ವಾಹನ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ತಿಂಗಳಿಂದ ಸೆಮಿಕಂಡಕ್ಟರ್ ಕೊರತೆಯಿಂದ ವಾಹನ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಇಂಧನ ಬೆಲೆ ಏರಿಕೆಯಿಂದ ಆತಂಕ ಎದುರಿಸುತ್ತಿದ್ದ ತಯಾರಿಕಾ ಸಂಸ್ಥೆಗಳಿಗೆ ಮತ್ತು ಗ್ರಾಹಕರಿಗೆ ಯುದ್ಧದ ಪರಿಣಾಮ ಮತ್ತೊಂದು ಹೊಡೆತ ಬಿದ್ದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಮತ್ತು ಬಿಡಿಭಾಗಗಳ ಸರಬರಾಜಿನಲ್ಲಿ ತೊಂದರೆಯಾಗುತ್ತಿರುವುದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಸೆಮಿಕಂಡಕ್ಟರ್ ಕೊರತೆ ಕೂಡ ಮುಂದಿನ ಕೆಲವು ತಿಂಗಳು ಮುಂದುವರಿಯುವ ಸಾಧ್ಯತೆ ಇದ್ದು, ಉತ್ಪಾದನೆ ಮತ್ತು ಬೇಡಿಕೆಯ ನಡುವೆ ದೊಡ್ಡ ಅಂತರ ಉಂಟಾಗುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular