ಸರ್ಕಾರಿ ಕೆಲಸವೆಂದರೆ ತಿಂಗಳುಗಟ್ಟಲೆ ಕಾಯಬೇಕು ಎಂಬ ಕಾಲ ಈಗ ಬದಲಾಗಿದೆ. ಸಾರ್ವಜನಿಕರಿಗೆ ಜಾತಿ, ಆದಾಯ, ವಾಸಸ್ಥಳ ದೃಢೀಕರಣ ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಲು ‘ಅಟಲ್ ಜೀ ಜನಸ್ನೇಹಿ ಕೇಂದ್ರಗಳು’ (ನೆಮ್ಮದಿ ಕೇಂದ್ರಗಳು) ಶ್ರಮಿಸುತ್ತಿವೆ.
ರೈತರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ಅಗತ್ಯವಿರುವ ಸುಮಾರು 35ಕ್ಕೂ ಹೆಚ್ಚು ಸೇವೆಗಳು ಇಲ್ಲಿ ಲಭ್ಯವಿದ್ದು, ಯಾವ ಸೇವೆ ಎಷ್ಟು ದಿನಗಳಲ್ಲಿ ನಿಮಗೆ ಸಿಗುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.ಈ ಕೇಂದ್ರಗಳಲ್ಲಿ ಕೇವಲ 7 ದಿನಗಳಿಂದ ಹಿಡಿದು ಗರಿಷ್ಠ 70 ದಿನಗಳ ಒಳಗೆ ನಿಮ್ಮ ಕೈಗೆ ಅಧಿಕೃತ ಪ್ರಮಾಣ ಪತ್ರಗಳು ಸಿಗಲಿವೆ. ವಿಶೇಷವಾಗಿ ರೈತರಿಗೆ ಪಹಣಿ ಪತ್ರಿಕೆ ಹಾಗೂ ಹಕ್ಕು ಬದಲಾವಣೆ ಪ್ರತಿಗಳು ತಕ್ಷಣವೇ (OTC) ದೊರೆಯಲಿವೆ.
| ಕ್ರ.ಸಂ | ಸೇವೆಗಳು | ನಿಗದಿಪಡಿಸಿದ ಕಾಲಮಿತಿ (ದಿನಗಳಲ್ಲಿ) |
| 1 | ಜಾತಿ ಮತ್ತು ಆದಾಯ ದೃಢೀಕರಣ ಪತ್ರ | 21 |
| 2 | ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರ (ಫಾರಂ-1) | 21 |
| 3 | ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳ ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂ) | 21 |
| 4 | ಆದಾಯ ದೃಢೀಕರಣ ಪತ್ರ | 7 |
| 5 | ಮರು ವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ | 7 |
| 6 | ವಾಸಸ್ಥಳ ದೃಢೀಕರಣ ಪತ್ರ | 7 |
| 7 | ಜೀವಂತ ದೃಢೀಕರಣ ಪತ್ರ | 7 |
| 8 | ಗೇಣಿ ರಹಿತ ದೃಢೀಕರಣ ಪತ್ರ | 7 |
| 9 | ದೃಢೀಕರಣಗೊಂಡ ಕುಟುಂಬದ ಸದಸ್ಯರ ದೃಢೀಕರಣ ಪತ್ರ | 7 |
| 10 | ಅವಲಂಬಿತ ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ | 7 |
| 11 | ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ | 7 |
| 12 | ಕೃಷಿ ಕಾರ್ಮಿಕ ದೃಢೀಕರಣ ಪತ್ರ | 7 |
| 13 | ನಿರುದ್ಯೋಗ ದೃಢೀಕರಣ ಪತ್ರ | 7 |
| 14 | ಶಾಲಾ ಶೈಕ್ಷಣಿಕ ಸಾಲ ದೃಢೀಕರಣ ಪತ್ರ (ಪೂರಕವಾಗಿ ಮಾತ್ರ) | 7 |
| 15 | ಜಾತಿ ಪ್ರಮಾಣ ಪತ್ರ | 21 |
| 16 | ಭೂ ರಹಿತ ದೃಢೀಕರಣ ಪತ್ರ | 7 |
| 17 | ವಂಶವೃಕ್ಷ ದೃಢೀಕರಣ ಪತ್ರ | 7 |
| 18 | ಆದಾಯ ದೃಢೀಕರಣ ಪತ್ರ | 21 |
| 19 | ಬೋನಫೈಡ್ ಸರ್ಟಿಫಿಕೇಟ್ ದೃಢೀಕರಣ ಪತ್ರ | 7 |
| 20 | ಆದಾಯ ದೃಢೀಕರಣ ಪತ್ರ (ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಉಪಯೋಗಿಸುವ) | 7 |
| 21 | ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ) | 21 |
| 22 | ಮೃತ ಕುಟುಂಬದ ಸದಸ್ಯರ ಹೆಸರಿನ ದೃಢೀಕರಣ ಪತ್ರ | 7 |
| 23 | ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ | 7 |
| 24 | ಬೆಳೆ ದೃಢೀಕರಣ ಪತ್ರ | 7 |
| 25 | ಭೂಮಿ ದೃಢೀಕರಣ ಪತ್ರ | 7 |
| 26 | ಮಾಸಾಶನ ದೃಢೀಕರಣ ಪತ್ರ | – |
| 27 | 371 (ಜೆ) ಅಡಿಯಲ್ಲಿ ನಿವಾಸಿ ಪ್ರಮಾಣ ಪತ್ರ | 7 |
| 28 | 371 (ಜೆ) ಅಡಿಯಲ್ಲಿ ಅರ್ಹತಾ ಪ್ರಮಾಣ ಪತ್ರ | 7 |
| 29 | ಹಕ್ಕು ಬದಲಾವಣೆ ಪ್ರತಿ | OTC (ತಕ್ಷಣ) |
| 30 | ಪಹಣಿ ಪತ್ರಿಕೆ | OTC (ತಕ್ಷಣ) |
| 31 | ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ | 70 |
| 32 | ಸಂಧ್ಯಾ ಸುರಕ್ಷಾ ವೇತನ | 70 |
| 33 | ಅಂಗವಿಕಲರ ವೇತನ | 70 |
| 34 | ವಿಧವಾ ವೇತನ | 70 |
| 35 | ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ | 70 |
| 36 | ಮೈತ್ರಿ | – |
| 37 | ಮನಸ್ವಿನಿ | – |

