ಚಿಕ್ಕಮಗಳೂರು ಜಿಲ್ಲೆ ಬೀರೂರಿನಲ್ಲಿ ಪುರುಷದ ಪ್ರಧಾನ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಹೆಣ್ಣು ಮಕ್ಕಳೇ ತಮ್ಮ ಚಿಕ್ಕಪ್ಪನ ಅಂತ್ಯ ಸಂಸ್ಕಾರ ನೆರವೇರಿಸಿದ ಅಪರೂಪದ ಘಟನೆ ನಡೆದಿದೆ.
ಭಾವಸಾರ ಕ್ಷತ್ರಿಯ ಸಮಾಜದ ವಿಶ್ವನಾಥ ಅವರು ಗುರುವಾರ ನಿಧನರಾಗಿದ್ದು, ಅವರಿಗೆ ಮಕ್ಕಳಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಐಶ್ವರ್ಯಾ ಅವರು, ಚಿಕ್ಕಪ್ಪ ವಿಶ್ವನಾಥ ಅವರೂ ನನ್ನ ತಂದೆಯಾಗಿದ್ದು, ಅಂತಿಮ ವಿಧಿ ವಿಧಾನವನ್ನು ನಾನೇ ನೆರವೇರಿಸುತ್ತೇನೆ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ.
ಅವರ ನಿರ್ಧಾರಕ್ಕೆ ಕುಟುಂಬದವರು ಮತ್ತು ಭಾವಸಾರ ಸಮಾಜದ ಮುಖಂಡರು ಸಮ್ಮತಿಸಿದ್ದು, ಸಹೋದರಿ ಭಾವನಾ ಅವರೊಂದಿಗೆ ಐಶ್ವರ್ಯಾ ಚಿಕ್ಕಪ್ಪ ವಿಶ್ವನಾಥ ಅವರ ಅಂತ್ಯಕ್ರಿಯೆಯನ್ನು ನಡೆಸಿಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

