ನವದೆಹಲಿ: ಪಶ್ಚಿಮ ಏಷ್ಯಾ (West Asia) ಭಾಗದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ವಿಮಾನ ಇಂಧನ (ATF) ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ದೇಶದ ಮುಂಚೂಣಿ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಇಂದಿನಿಂದ (ಮಾರ್ಚ್ 14, 2026) ಜಾರಿಗೆ ಬರುವಂತೆ ಹೊಸ ಇಂಧನ ಸರ್ಚಾರ್ಜ್ (Fuel Surcharge) ಘೋಷಿಸಿದೆ. ಇದರಿಂದಾಗಿ ಇಂದಿನಿಂದ ವಿಮಾನ ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.
ದರ ಏರಿಕೆ ಎಷ್ಟು? : ಪ್ರಯಾಣದ ದೂರ ಮತ್ತು ಮಾರ್ಗವನ್ನು ಅವಲಂಬಿಸಿ ಪ್ರತಿ ಟಿಕೆಟ್ ಮೇಲೆ 425 ರೂಪಾಯಿಯಿಂದ 2,300 ರೂಪಾಯಿವರೆಗೆ ಹೆಚ್ಚುವರಿ ಇಂಧನ ಶುಲ್ಕವನ್ನು ವಿಧಿಸಲಾಗುತ್ತಿದೆ.
ಯಾವ ಮಾರ್ಗಕ್ಕೆ ಎಷ್ಟು ಶುಲ್ಕ?:
ಭಾರತದೊಳಗಿನ ಪ್ರಯಾಣ (Domestic): ₹425
ಮಧ್ಯಪ್ರಾಚ್ಯ ರಾಷ್ಟ್ರಗಳು (Middle East): ₹900
ಆಗ್ನೇಯ ಏಷ್ಯಾ, ಚೀನಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ: ₹1,800
ಯುರೋಪ್: ₹2,300
ಕಾರಣವೇನು?: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ ಗಡಿ ದಾಟಿದೆ. ಇದರಿಂದಾಗಿ ಏರ್ ಟರ್ಬೈನ್ ಇಂಧನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದ್ದು, ಆ ಹೊರೆಯನ್ನು ಸರಿದೂಗಿಸಲು ಇಂಡಿಗೋ ಈ ನಿರ್ಧಾರ ಕೈಗೊಂಡಿದೆ.
ಎರಡನೇ ಸಂಸ್ಥೆ: ಈಗಾಗಲೇ ಏರ್ ಇಂಡಿಯಾ ಇಂಧನ ಸರ್ಚಾರ್ಜ್ ಘೋಷಿಸಿದ್ದು, ಈಗ ಇಂಡಿಗೋ ಕೂಡ ಅದೇ ಹಾದಿ ಹಿಡಿದಿದೆ. ಮಾರ್ಚ್ 14ರ ಮಧ್ಯರಾತ್ರಿಯಿಂದಲೇ ಹೊಸ ಬುಕಿಂಗ್ಗಳಿಗೆ ಈ ದರ ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

