ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ, ಕಳೆದ 10 ದಿನಗಳಲ್ಲಿ ಅಡುಗೆ ಎಣ್ಣೆಯ ದರ ಲೀಟರ್‌ಗೆ 7 ರಿಂದ 11 ರೂಪಾಯಿ ವರೆಗೆ ಹೆಚ್ಚಳವಾಗಿದೆ.
ಮಾರ್ಚ್ ಮೊದಲ ವಾರಕ್ಕೆ ಹೋಲಿಸಿದರೆ, ಸನ್‌ಫ್ಲವರ್ ಆಯಿಲ್ ಮತ್ತು ಇತರ ಬ್ರ್ಯಾಂಡ್‌ಗಳ ಬೆಲೆ ಗಣನೀಯವಾಗಿ ಏರಿದೆ. ಮಾರ್ಚ್ 4ರಂದು 167 ರೂ. ಇದ್ದ ಸನ್‌ಫ್ಲವರ್ ಆಯಿಲ್ ಬೆಲೆ ಮಾರ್ಚ್ 12ರ ವೇಳೆಗೆ 172 ರೂ.ಗೆ ತಲುಪಿದೆ.’ಗೋಲ್ಡ್ ವಿನ್ನರ್’ ಎಣ್ಣೆಯ ಹೋಲ್‌ಸೇಲ್ ದರ 159 ರೂ.ನಿಂದ 166 ರೂ.ಗೆ ಏರಿಕೆಯಾಗಿದೆ. ಫ್ರೀಡಂ ಆಯಿಲ್ ಬೆಲೆ 158 ರೂ.ನಿಂದ 166 ರೂ.ಗೆ ತಲುಪಿದೆ.
ಆನ್‌ಲೈನ್ ಆ್ಯಪ್‌ಗಳಲ್ಲಿ ದುಬಾರಿ: ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 160 ರೂ.ನಿಂದ171 ರೂ. ವರೆಗೆ ಏರಿಕೆಯಾಗಿದೆ.ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಹೋಲ್‌ಸೇಲ್ ವ್ಯಾಪಾರಿಗಳು ಬೇಡಿಕೆಗೆ ಅನುಗುಣವಾಗಿ ಎಣ್ಣೆಯನ್ನು ಪೂರೈಸುತ್ತಿಲ್ಲ. 100 ಬಾಕ್ಸ್ ಆರ್ಡರ್ ಮಾಡಿದರೆ ಕೇವಲ 20 ರಿಂದ 50 ಬಾಕ್ಸ್ ಮಾತ್ರ ಪೂರೈಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುದ್ಧದ ಎಫೆಕ್ಟ್ : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಯುದ್ಧಕ್ಕೆ ಮುಂದಾದ ಬೆನ್ನಲ್ಲೇ ಕಚ್ಚಾ ತೈಲ ಮತ್ತು ಅಡುಗೆ ಎಣ್ಣೆಯ ಆಮದಿನ ಮೇಲೆ ಪರಿಣಾಮ ಬೀರಿದ್ದು, ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬೆನ್ನಲ್ಲೇ ಜನತೆ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಶಾಕ್ ಅನುಭವಿಸುವಂತಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಯುದ್ಧಕ್ಕೆ ಮುಂದಾದ ಬೆನ್ನಲ್ಲೇ ಅಡುಗೆ ಎಣ್ಣೆ ದರವೂ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಮಾರ್ಚ್ ಮೊದಲ ವಾರದ ದರಕ್ಕೂ ಗುರುವಾರದ ದರಕ್ಕೂ ಹೋಲಿಸಿದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಆಧಾರದಲ್ಲಿ ಲೀಟರ್‌ಗೆ 7 ರಿಂದ 11 ರೂಪಾಯಿಯವರೆಗೂ ಹೆಚ್ಚಳವಾಗಿದೆ.

