ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆಯು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡಿದೆ. ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಬಂದ್ ಆಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಭಾರತವು ತನ್ನ ಸಿಲಿಂಡರ್ ಬಳಕೆಯ ಬಹುಪಾಲು ಪಾಲನ್ನು ಆಮದು ಮಾಡಿಕೊಳ್ಳುವುದರಿಂದ, ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಎದುರಾಗುವ ಸಾಧ್ಯತೆಯಿದೆ.
ಈ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೆ, ಮನೆಯಲ್ಲೇ ಗ್ಯಾಸ್ ಉಳಿಸುವ ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಗ್ಯಾಸ್ ಉಳಿಸಲು ಇಲ್ಲಿದೆ ಸರಳ ಮಾರ್ಗಗಳು
ಸಣ್ಣ ಉರಿಯಲ್ಲಿ ಅಡುಗೆ ಮಾಡಿ:
• ಪಾತ್ರೆ ಬಿಸಿಯಾದ ನಂತರ ಉರಿಯನ್ನು ಕಡಿಮೆ ಮಾಡಿ (Simmer). ಸಣ್ಣ ಉರಿಯಲ್ಲಿ ಆಹಾರ ಬೇಯಿಸುವುದರಿಂದ ಗ್ಯಾಸ್ ಉಳಿತಾಯವಾಗುವುದಲ್ಲದೆ ಆಹಾರದ ಪೌಷ್ಟಿಕಾಂಶವೂ ಉಳಿಯುತ್ತದೆ.
ಈ ಸಲಹೆಗಳನ್ನು ಪಾಲಿಸುವುದರಿಂದ ಒಂದು ಸಿಲಿಂಡರ್ ಅನ್ನು ಹೆಚ್ಚುವರಿಯಾಗಿ 15 ರಿಂದ 20 ದಿನಗಳ ಕಾಲ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.
ಪೂರ್ವ ಸಿದ್ಧತೆ ಅತ್ಯಗತ್ಯ:
• ಸ್ಟೌವ್ ಹಚ್ಚುವ ಮೊದಲೇ ತರಕಾರಿ ಕತ್ತರಿಸುವುದು, ಮಸಾಲೆ ಸಿದ್ಧಪಡಿಸುವುದು ಸೇರಿದಂತೆ ಅಡುಗೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಹತ್ತಿರ ಇಟ್ಟುಕೊಳ್ಳಿ. ಸ್ಟೌವ್ ಹಚ್ಚಿದ ನಂತರ ಸಾಮಗ್ರಿಗಳನ್ನು ಹುಡುಕುವುದರಿಂದ ಗ್ಯಾಸ್ ವ್ಯರ್ಥವಾಗುತ್ತದೆ.
ಪಾತ್ರೆಗಳ ಮೇಲೆ ಮುಚ್ಚಳವಿರಲಿ:
• ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಸರಿಯಾದ ಮುಚ್ಚಳವನ್ನು ಮುಚ್ಚಿ. ಇದರಿಂದ ಉಗಿ (Steam) ಒಳಗೇ ಇರುವುದರಿಂದ ಆಹಾರ ಬೇಗ ಬೇಯುತ್ತದೆ ಮತ್ತು ಶಾಖ ವ್ಯರ್ಥವಾಗುವುದಿಲ್ಲ.
ಧಾನ್ಯಗಳನ್ನು ನೆನೆಸಿಡಿ:
• ಅಕ್ಕಿ, ಬೇಳೆ ಅಥವಾ ಇತರ ಕಾಳುಗಳನ್ನು ಬೇಯಿಸುವ ಮೊದಲು ಕನಿಷ್ಠ 15-30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದರಿಂದ ಅವು ಬೇಗನೆ ಬೇಯುತ್ತವೆ ಮತ್ತು ಸುಮಾರು 20% ಗ್ಯಾಸ್ ಉಳಿತಾಯವಾಗುತ್ತದೆ.
ಪ್ರೆಶರ್ ಕುಕ್ಕರ್ ಬಳಸಿ
• ಬೇಳೆಕಾಳು ಅಥವಾ ಮಾಂಸದಂತಹ ಆಹಾರ ಪದಾರ್ಥಗಳನ್ನು ಬೇಯಿಸಲು ಕುಕ್ಕರ್ ಬಳಸುವುದು ಅತ್ಯಂತ ಉತ್ತಮ. ಇದು ಸಮಯ ಮತ್ತು ಅನಿಲ ಎರಡನ್ನೂ ಉಳಿಸುತ್ತದೆ. ಕುಕ್ಕರ್ನ ಗ್ಯಾಸ್ಕೆಟ್ ಸರಿಯಾಗಿದೆಯೇ ಎಂದು ಗಮನಿಸಿ.
ಸರಿಯಾದ ಪಾತ್ರೆಯ ಆಯ್ಕೆ
• ಬರ್ನರ್ನ ಗಾತ್ರಕ್ಕೆ ತಕ್ಕಂತೆ ಪಾತ್ರೆಗಳನ್ನು ಬಳಸಿ. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆ ಇಡುವುದು ಅಥವಾ ದೊಡ್ಡ ಉರಿಯ ಮೇಲೆ ಸಣ್ಣ ಪಾತ್ರೆ ಇಡುವುದು ಗ್ಯಾಸ್ ವ್ಯರ್ಥಕ್ಕೆ ಕಾರಣವಾಗುತ್ತದೆ.
ನೀರಿನ ಪ್ರಮಾಣ:
• ಅಡುಗೆಗೆ ಅಗತ್ಯವಿರುವಷ್ಟು ಮಾತ್ರ ನೀರನ್ನು ಬಳಸಿ. ಹೆಚ್ಚು ನೀರು ಹಾಕುವುದರಿಂದ ಅದು ಕುದಿಯಲು ಹೆಚ್ಚಿನ ಸಮಯ ಮತ್ತು ಗ್ಯಾಸ್ ಬೇಕಾಗುತ್ತದೆ.

