HomeLatest NewsBIG NEWS : 'ಗ್ಯಾಸ್ ಸಿಲಿಂಡರ್' ಬುಕ್ ಮಾಡಿದರೆ  ಪೂರೈಕೆ ಗ್ಯಾರಂಟಿ : ಸಚಿವ ಕೆ.ಹೆಚ್...

BIG NEWS : ‘ಗ್ಯಾಸ್ ಸಿಲಿಂಡರ್’ ಬುಕ್ ಮಾಡಿದರೆ  ಪೂರೈಕೆ ಗ್ಯಾರಂಟಿ : ಸಚಿವ ಕೆ.ಹೆಚ್ ಮುನಿಯಪ್ಪ ಭರವಸೆ

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಎದುರಾಗಿರುವ ಅಡುಗೆ ಅನಿಲ (LPG) ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ದೇಶಾದ್ಯಂತ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಬೀರಿದೆ.ಸಿಲಿಂಡರ್ ಪೂರೈಕೆ ಇಲ್ಲ ಎಂದು ಯಾವುದೇ ಡಿಸ್ಟ್ರಿಬ್ಯೂಟರ್ ಗ್ರಾಹಕರಿಗೆ ಹೇಳುವ ಹಾಗಿಲ್ಲ. ತಿಂಗಳಿಗೆ ಕನಿಷ್ಠ ಒಂದು ಸಿಲಿಂಡರ್ ನೀಡಲೇಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಸಿಲಿಂಡರ್ ಕೊರತೆಯನ್ನು ಬಂಡವಾಳ ಮಾಡಿಕೊಂಡು ಯಾರೂ ಕೃತಕ ಅಭಾವ ಸೃಷ್ಟಿಸಬಾರದು ಅಥವಾ ಬ್ಲ್ಯಾಕ್ ಮಾರ್ಕೆಟ್ ಮಾಡಬಾರದು. ಒಂದು ವೇಳೆ ಗ್ರಾಹಕರಿಗೆ ಬ್ಲ್ಯಾಕ್ ಮೇಲ್ ಅಥವಾ ವಂಚನೆ ಮಾಡಿದರೆ ಅಂತಹ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಯುದ್ಧ ಮುಂದುವರೆದರೆ ಸಮಸ್ಯೆ ಉಲ್ಬಣಿಸಬಹುದು. ಆದ್ದರಿಂದ ಗ್ರಾಹಕರು ಅನಿಲವನ್ನು ಅವಶ್ಯಕತೆ ಇರುವಾಗ ಮಾತ್ರ ಮಿತವಾಗಿ ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಅನಿಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular