HomeLatest NewsBIG NEWS: ಅನ್ಯಧರ್ಮೀಯನನ್ನು ವಿವಾಹವಾದ ಮೊಮ್ಮಗಳು: 40 ದಿನಗಳ ಮರಿಮೊಮ್ಮಗುವನ್ನೇ ಕೊಲೆಗೈದ ಅಜ್ಜಿ

BIG NEWS: ಅನ್ಯಧರ್ಮೀಯನನ್ನು ವಿವಾಹವಾದ ಮೊಮ್ಮಗಳು: 40 ದಿನಗಳ ಮರಿಮೊಮ್ಮಗುವನ್ನೇ ಕೊಲೆಗೈದ ಅಜ್ಜಿ

ಚಿಕ್ಕಬಳ್ಳಾಪುರ: ಮೊಮ್ಮಗಳು ಅಂತರ್ಧಮೀಯ ಯುವಕನ್ನು ಪ್ರೀತಿಸಿ ವಿವಾಹವಾದ ದ್ವೇಷಕ್ಕೆ ಅಜ್ಜಿ, ಮೊಮ್ಮಗಳ ೪೦ ದಿನಗಳ ಹಸುಗೂಸನ್ನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಸದ್ಯ ಆರೋಪಿ ಅ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಮೆಹಬೂಬಿ ಎಂದು ಗುರುತಿಸಲಾಗಿದೆ. ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್​ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸೆಂಬರ್ 24ರಂದು ಚೇಳೂರು ಪಟ್ಟಣದಲ್ಲಿ ಮೆಹಮೂಬಿ ಎಂಬಾಕೆಯ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಅನಾರೋಗ್ಯ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಗು ಶವವನ್ನು ಮಣ್ಣು ಸಹ ಮಾಡಿಸಿಬಿಟ್ಟಿದ್ದಳು.

ಇದಾದ ಬಳಿಕ ಅಜ್ಜಿಯ ವರ್ತನೆ ಕಂಡು ಮೊಮ್ಮಗಳಿಗೆ ಅಜ್ಜಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಮೊಮ್ಮಗಳು, ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್​ಎಸ್​ಎಲ್​ ವರದಿಗೆ ಕಳುಹಿಸಲಾಗಿತ್ತು. ಎಫ್​ಎಸ್​ಎಲ್​ ವರದಿಯಲ್ಲಿ ಮಗು ಉಸಿರುಗಟ್ಟಿಸಿ ಕೊಂದಿರುವುದಾಗಿ ದೃಢಪಟ್ಟಿತ್ತು. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದ್ದು, ಮೆಹಬೂಬಿಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

ಅಜ್ಜಿ ಮೆಹಬೂಬಿ ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮವಿವಾಹವಾಗಿದ್ದಳು. ಬಾಣಂತನಕ್ಕೆ ಅಂತ ಅಜ್ಜಿಯ ಮನೆಗೆ ಬಂದಿದ್ದಳು. ಅಜ್ಜಿಗೆ ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿರುವುದು ಇಷ್ಟವಿರಲಿಲ್ಲ. ಮಗುವನ್ನ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಮೆಹಬೂಬಿ ಬಾಯ್ಬಿಟ್ಟಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular