ಬೆಂಗಳೂರು, ಮಾರ್ಚ್ 10: ಕಳೆದ ಕೆಲವು ದಿನಗಳಿಂದ ಸತತ ಇಳಿಕೆ ಕಂಡು ಸಮಾಧಾನ ತಂದಿದ್ದ ಚಿನ್ನದ ಬೆಲೆ, ಇಂದು ಮಂಗಳವಾರ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಆರ್ಥಿಕ ಅಸ್ಥಿರತೆಯ ಪರಿಣಾಮವಾಗಿ ಹಳದಿ ಲೋಹದ ಬೆಲೆ ಇಂದು ಗಗನಕ್ಕೇರಿದೆ.
ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹700 ಏರಿಕೆಯಾಗಿದ್ದು, ಈಗ ಬೆಂಗಳೂರಿನಲ್ಲಿ ಅದರ ಬೆಲೆ ₹1,62,380 ತಲುಪಿದೆ.
ಬೆಳ್ಳಿಯಲ್ಲೂ ಭರ್ಜರಿ ಜಿಗಿತ: ಬಂಗಾರದ ಜೊತೆಗೆ ಬೆಳ್ಳಿಯೂ ಇಂದು ದುಬಾರಿಯಾಗಿದೆ. ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಸರಿಸುಮಾರು ₹10 ಸಾವಿರದಷ್ಟು ಏರಿಕೆ ಕಂಡಿರುವುದು ಜನಸಾಮಾನ್ಯರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ ಬೆಲೆ ₹29,000 ರಷ್ಟಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,238 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,885 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,179 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 14,885 ರೂ
ಚೆನ್ನೈ: 15,050 ರೂ
ಮುಂಬೈ: 14,885 ರೂ
ದೆಹಲಿ: 14,900 ರೂ
ಕೋಲ್ಕತಾ: 14,885 ರೂ
ಕೇರಳ: 14,885 ರೂ
ಅಹ್ಮದಾಬಾದ್: 14,890 ರೂ
ಜೈಪುರ್: 14,900 ರೂ
ಲಕ್ನೋ: 14,900 ರೂ
ಭುವನೇಶ್ವರ್: 14,885 ರೂ

