HomeBusinessಮಕ್ಕಳನ್ನು ಲಕ್ಷಾಧಿಪತಿ ಮಾಡುವ ಪೋಸ್ಟ್ ಆಫೀಸ್ ಯೋಜನೆ: ದಿನಕ್ಕೆ ₹6 ಇನ್ವೆಸ್ಟ್ ಮಾಡಿ, ₹6 ಲಕ್ಷ...

ಮಕ್ಕಳನ್ನು ಲಕ್ಷಾಧಿಪತಿ ಮಾಡುವ ಪೋಸ್ಟ್ ಆಫೀಸ್ ಯೋಜನೆ: ದಿನಕ್ಕೆ ₹6 ಇನ್ವೆಸ್ಟ್ ಮಾಡಿ, ₹6 ಲಕ್ಷ ನಿಮ್ಮದಾಗಿಸಿ

ಬೆಂಗಳೂರು: ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ಆಕಾಶದ ಎತ್ತರಕ್ಕೆ ಬೆಳೆಯಬೇಕೆಂಬ ಕನಸಿರುತ್ತದೆ. ಆದರೆ, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಶಾಲಾ-ಕಾಲೇಜು ಶುಲ್ಕ ಮತ್ತು ಮದುವೆ ವೆಚ್ಚಗಳನ್ನು ನೆನೆದರೆ ಮಧ್ಯಮ ವರ್ಗದ ಪೋಷಕರಲ್ಲಿ ನಡುಕ ಹುಟ್ಟುವುದು ಸಹಜ. ನಮ್ಮ ಇಂದಿನ ಅಲ್ಪ ಉಳಿತಾಯ ಮಕ್ಕಳ ನಾಳಿನ ದೊಡ್ಡ ಕನಸುಗಳಿಗೆ ಆಧಾರವಾಗಬಲ್ಲದೇ? ಎಂಬ ನಿಮ್ಮೆಲ್ಲಾ ಆತಂಕಗಳಿಗೆ ಭಾರತೀಯ ಅಂಚೆ ಇಲಾಖೆ (India Post) ಈಗ ಸೂಕ್ತ ಪರಿಹಾರ ನೀಡಿದೆ. ಅದುವೇ ಬಾಲ್ ಜೀವನ್ ಭೀಮಾ ಯೋಜನೆ (Bal Jeevan Bima Yojana). ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡುವ ಈ ಯೋಜನೆ ಪೋಷಕರಿಗೆ ಆರ್ಥಿಕ ಹೊರೆಯಾಗದಂತೆ ಮಕ್ಕಳ ಜೀವನಕ್ಕೆ ಬಲ ತುಂಬಲಿದೆ.

ಏನಿದು ಬಾಲ್ ಜೀವನ್ ಭೀಮಾ ಯೋಜನೆ?
ಇದು ಕೇವಲ ಉಳಿತಾಯ ಯೋಜನೆಯಲ್ಲ ಬದಲಿಗೆ ನಿಮ್ಮ ಮಗುವಿನ ಭವಿಷ್ಯಕ್ಕೆ ನೀಡುವ ಆರ್ಥಿಕ ರಕ್ಷಾಕವಚ. ಮಕ್ಕಳ ಉನ್ನತ ವ್ಯಾಸಂಗ, ಮದುವೆ ಅಥವಾ ತುರ್ತು ಆರೋಗ್ಯ ಸಮಸ್ಯೆಗಳ ಸಮಯದಲ್ಲಿ ಹಣದ ಕೊರತೆಯಾಗದಂತೆ ಈ ಯೋಜನೆ ಕಾಪಾಡುತ್ತದೆ. ಇದರಲ್ಲಿ ಲೈಫ್ ಇನ್ಶೂರೆನ್ಸ್ ಮತ್ತು ಸೇವಿಂಗ್ಸ್ ಎರಡರ ಲಾಭವೂ ಅಡಗಿದೆ.

ದಿನಕ್ಕೆ ₹36 ಹೂಡಿಕೆ – ₹6 ಲಕ್ಷದ ಭರ್ಜರಿ ಲಾಭ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಬ್ಬ ಮಗುವಿಗೆ ದಿನಕ್ಕೆ ಕೇವಲ ₹18 ಉಳಿಸಿದರೆ ಸಾಕು. ಅಂದರೆ ಇಬ್ಬರು ಮಕ್ಕಳಿದ್ದರೆ ದಿನಕ್ಕೆ ₹36 ಹೂಡಿಕೆ ಮಾಡಬೇಕಾಗುತ್ತದೆ.

ಲಾಭದ ಲೆಕ್ಕಾಚಾರ ಇಲ್ಲಿದೆ ನೋಡಿ:

ಹೂಡಿಕೆಯ ವಿವರಗಳುಮೊತ್ತ (₹)ಇಬ್ಬರು ಮಕ್ಕಳಿಗೆ ದಿನದ ಹೂಡಿಕೆ₹36

ತಿಂಗಳ ಒಟ್ಟು ಉಳಿತಾಯ₹1,080

ವರ್ಷದ ಒಟ್ಟು ಹೂಡಿಕೆ₹12,960

15 ವರ್ಷಗಳ ನಂತರ ಸಿಗುವ ಒಟ್ಟು ಲಾಭಅಂದಾಜು ₹6,00,000 ವರೆಗೆ

ಈ ಯೋಜನೆಯ ಟಾಪ್ 4 ವಿಶೇಷತೆಗಳು:
ಸರ್ಕಾರಿ ಭರವಸೆ: ಇದು ಕೇಂದ್ರ ಸರ್ಕಾರದ ಅಧೀನದ ಪೋಸ್ಟ್ ಆಫೀಸ್ ಯೋಜನೆಯಾದ್ದರಿಂದ ನಿಮ್ಮ ಹಣಕ್ಕೆ 100% ಗ್ಯಾರಂಟಿ ಇರುತ್ತದೆ.

ಟ್ಯಾಕ್ಸ್ ಬೆನಿಫಿಟ್: ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ (Tax Benefits) ಪಡೆಯುವ ಅವಕಾಶವೂ ಇದೆ.

ಬ್ಯಾಂಕ್ ಅಕೌಂಟ್ ಬೇಕಿಲ್ಲ: ಗ್ರಾಮೀಣ ಭಾಗದ ಜನರಿಗೂ ಸುಲಭವಾಗಿ ಸಿಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.

ಸುರಕ್ಷತಾ ಕವಚ: ಪೋಷಕರಿಗೆ ಅಥವಾ ಮಕ್ಕಳಿಗೆ ಅನಿರೀಕ್ಷಿತವಾಗಿ ಏನಾದರೂ ಅವಘಡ ಸಂಭವಿಸಿದರೆ, ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.

ಯಾರು ಅರ್ಜಿ ಸಲ್ಲಿಸಬಹುದು? (Eligibility)
ಮಗುವಿನ ವಯಸ್ಸು: ಕನಿಷ್ಠ 5 ರಿಂದ ಗರಿಷ್ಠ 20 ವರ್ಷದೊಳಗಿರಬೇಕು.

ಪೋಷಕರ ವಯಸ್ಸು: 18 ರಿಂದ 45 ವರ್ಷದೊಳಗಿರಬೇಕು.

ಖಾತೆಯನ್ನು ಮಗುವಿನ ಹೆಸರಲ್ಲೇ ತೆರೆಯಲಾಗುತ್ತದೆ, ಆದರೆ ಪೋಷಕರು ಅದರ ನಿರ್ವಹಣೆ ಮಾಡುತ್ತಾರೆ

ಬೇಕಾಗುವ ದಾಖಲೆಗಳು (Documents Required):

ಮಗುವಿನ ಜನನ ಪ್ರಮಾಣಪತ್ರ (Birth Certificate).

ಮಗುವಿನ ಮತ್ತು ಪೋಷಕರ ಆಧಾರ್ ಕಾರ್ಡ್.

ಪೋಷಕರ ಪಾಸ್‌ಪೋರ್ಟ್ ಸೈಜ್ ಫೋಟೋ.

ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಅರ್ಜಿ ಪಡೆಯಿರಿ ಹೆಚ್ಚಿನ ಮಾಹಿತಿಗಾಗಿ www.indiapost.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular