ನವದೆಹಲಿ : ಮಾರ್ಚ್ ತಿಂಗಳು ಆರಂಭವಾಗಿದ್ದು, ಈ ತಿಂಗಳು ಹಬ್ಬಗಳ ಸುರಿಮಳೆಯೇ ಇದೆ. ಹೋಳಿ, ಈದ್, ಮಹಾವೀರ ಜಯಂತಿ ಮತ್ತು ರಾಮನವಮಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳ ಕಾರಣದಿಂದಾಗಿ ಬ್ಯಾಂಕ್ಗಳಿಗೆ ಹೆಚ್ಚಿನ ರಜೆ ಇರಲಿದೆ.
ಶನಿವಾರ ಮತ್ತು ಭಾನುವಾರಗಳನ್ನು ಸೇರಿಸಿದರೆ, ಈ ತಿಂಗಳು ಒಟ್ಟು 18 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಆದರೆ, ಈ ರಜೆಗಳು ವಿವಿಧ ನಗರ ಮತ್ತು ರಾಜ್ಯಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಆದ್ದರಿಂದ ಗ್ರಾಹಕರು ಬ್ಯಾಂಕ್ಗೆ ಹೋಗುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.
ಮಾರ್ಚ್ 1, 8, 15, 22 ಮತ್ತು 29 ರಂದು ಭಾನುವಾರ ಇರುವುದರಿಂದ ದೇಶಾದ್ಯಂತ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಹಾಗೆಯೇ, ಮಾರ್ಚ್ 14 (ಎರಡನೇ ಶನಿವಾರ) ಮತ್ತು ಮಾರ್ಚ್ 28 (ನಾಲ್ಕನೇ ಶನಿವಾರ) ರಂದೂ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ.
ಇದರೊಂದಿಗೆ ಮಾರ್ಚ್ 2, 3, 4, 13, 17, 19, 20, 21, 26, 27 ಮತ್ತು 31 ರಂದು ದೇಶದ ವಿವಿಧ ನಗರಗಳಲ್ಲಿ ರಜೆ ಇರಲಿದೆ.
ಮಾರ್ಚ್ 2026 ರ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ
- ಮಾರ್ಚ್ 2: ಹೋಲಿಕಾ ದಹನ (ಉತ್ತರ ಪ್ರದೇಶದಲ್ಲಿ ರಜೆ).
- ಮಾರ್ಚ್ 3: ಹೋಳಿ, ಡೋಲ್ ಜಾತ್ರಾ, ಧುಲೆಂಡಿ – ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ.
- ಮಾರ್ಚ್ 4: ಹೋಳಿ/ಧುಲೇಟಿ – ಗುಜರಾತ್, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ.
- ಮಾರ್ಚ್ 13: ಚಾಪ್ಚಾರ್ ಕುಟ್ ಹಬ್ಬ (ಮಿಜೋರಾಂನಲ್ಲಿ ರಜೆ).
- ಮಾರ್ಚ್ 17: ಶಬ್-ಎ-ಖಾದರ್ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ).
- ಮಾರ್ಚ್ 19: ಯುಗಾದಿ, ಗುಡಿ ಪಾಡ್ವಾ, ತೆಲುಗು ಹೊಸ ವರ್ಷ – ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬ್ಯಾಂಕ್ಗಳಿಗೆ ರಜೆ.
- ಮಾರ್ಚ್ 20: ಈದ್-ಉಲ್-ಫಿತರ್ ಮತ್ತು ಜಮಾತ್-ಉಲ್-ವಿದಾ (ಕೇರಳ, ಆಂಧ್ರಪ್ರದೇಶ ಮತ್ತು ಜಮ್ಮು-ಕಾಶ್ಮೀರ).
- ಮಾರ್ಚ್ 21: ಈದ್–ಉಲ್–ಫಿತರ್ (ರಂಜಾನ್) – ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ರಜೆ.
- ಮಾರ್ಚ್ 26: ಶ್ರೀ ರಾಮನವಮಿ – ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ.
- ಮಾರ್ಚ್ 27: ಶ್ರೀ ರಾಮನವಮಿ (ಮಧ್ಯಪ್ರದೇಶ, ಒಡಿಶಾ, ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ ರಜೆ).
- ಮಾರ್ಚ್ 31: ಮಹಾವೀರ ಜಯಂತಿ – ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ.
ಸೂಚನೆ: ಬ್ಯಾಂಕ್ ರಜೆಗಳಿದ್ದರೂ ಸಹ ಎಟಿಎಂ (ATM), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಅಡೆತಡೆಯಿಲ್ಲದೆ ಲಭ್ಯವಿರುತ್ತವೆ.

