HomeAstroಅದೃಷ್ಟ ತರುವ ನಂದಿ ಬಾಗಿಲು: ನಿಮ್ಮ ಮನೆಯ ಉತ್ತರ ದಿಕ್ಕು ಹೀಗಿದ್ರೆ ಸಾಕು, ಹಣದ ಮಳೆ...

ಅದೃಷ್ಟ ತರುವ ನಂದಿ ಬಾಗಿಲು: ನಿಮ್ಮ ಮನೆಯ ಉತ್ತರ ದಿಕ್ಕು ಹೀಗಿದ್ರೆ ಸಾಕು, ಹಣದ ಮಳೆ ಖಂಡಿತ

ಬೆಂಗಳೂರು: ಮನೆ ಕಟ್ಟುವಾಗ ಅಥವಾ ಬಾಡಿಗೆಗೆ ಪಡೆಯುವಾಗ ನಾವು ಮೊದಲು ನೋಡುವುದೇ ದಿಕ್ಕು. ಅದರಲ್ಲೂ ‘ನಂದಿ ಬಾಗಿಲು’ ಅಥವಾ ‘ಸೂರ್ಯನ ಬಾಗಿಲು’ ಎಂದೇ ಖ್ಯಾತಿಯಾಗಿರುವ ಉತ್ತರ ದಿಕ್ಕಿನ ಮನೆಗಳು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನ ಮನೆಯಲ್ಲಿ ಸಣ್ಣ ತಪ್ಪುಗಳಾದರೂ ಅದು ದೊಡ್ಡ ಆರ್ಥಿಕ ನಷ್ಟಕ್ಕೆ ದಾರಿಯಾಗಬಹುದು.

ಉತ್ತರ ದಿಕ್ಕಿನ ಅಧಿಪತಿ ಯಾರು?


ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ಕುಬೇರ ಅಧಿಪತಿ. ಈ ದಿಕ್ಕಿನ ಪ್ರತಿನಿಧಿ ಗ್ರಹ ಬುಧ. ಮನೆಯ ಈ ಭಾಗದಲ್ಲಿ ಪೂಜಾ ಕೋಣೆ, ಅತಿಥಿಗಳ ರೂಮ್ ಅಥವಾ ಆಫೀಸ್ ಇದ್ದರೆ ಅದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಂಪತ್ತು ಮತ್ತು ಜ್ಞಾನವನ್ನು ವೃದ್ಧಿಸುತ್ತದೆ.

ಗಮನಿಸಲೇಬೇಕಾದ ವಾಸ್ತು ದೋಷಗಳು:

ಬಿರುಕು ಬಿಟ್ಟ ಗೋಡೆಗಳು: ಮನೆಯ ಉತ್ತರ ದಿಕ್ಕಿನ ಗೋಡೆಯಲ್ಲಿ ಬಿರುಕುಗಳಿದ್ದರೆ, ಮನೆಯ ಸದಸ್ಯರು ಅನಗತ್ಯವಾಗಿ ಮಾನಸಿಕ ಚಿಂತೆಗೆ ಒಳಗಾಗುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಸದ ರಾಶಿ ಬೇಡ: ಉತ್ತರ ದಿಕ್ಕಿನಲ್ಲಿ ಹಳೆಯ ವಸ್ತುಗಳ ಸಂಗ್ರಹ ಅಥವಾ ಇಕ್ಕಟ್ಟಾದ ದಾರಿ ಇದ್ದರೆ, ಆ ಮನೆಯಲ್ಲಿ ಅದೃಷ್ಟ ಮರೆಯಾಗಿ ಸಂಪತ್ತು ನಿಧಾನವಾಗಿ ಕರಗುತ್ತಾ ಹೋಗುತ್ತದೆ.

ನೀರಿನ ನೆಲೆ: ಒಂದು ವೇಳೆ ಇಲ್ಲಿ ಕೊಳಕು ಭಾವಿ ಅಥವಾ ಸೋರುತ್ತಿರುವ ನಲ್ಲಿ ಇದ್ದರೆ, ಲಕ್ಷ್ಮಿ ಆ ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ ಎನ್ನಲಾಗುತ್ತದೆ.

ಎತ್ತರದ ವ್ಯತ್ಯಾಸ: ಮನೆಯ ಉತ್ತರ ಭಾಗವು ಮಧ್ಯ ಭಾಗಕ್ಕಿಂತ ಎತ್ತರವಾಗಿದ್ದರೆ ಸಾಲದ ಬಾಧೆ, ಅಶಾಂತಿ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ.

ಮಲಗುವ ದಿಕ್ಕು: ಎಲ್ಲರಿಗೂ ತಿಳಿದಿರುವಂತೆ, ಉತ್ತರಕ್ಕೆ ತಲೆ ಹಾಕಿ ಮಲಗುವುದು ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಲ್ಲ.

ಪೂಜಾ ಕೊಠಡಿಯು ಉತ್ತರ ಮತ್ತು ಪೂರ್ವದ ನಡುವೆ ಇರಬೇಕು.

ಮಕ್ಕಳ ಕೋಣೆಗೆ ಪಶ್ಚಿಮವು ಉತ್ತಮವಾಗಿದೆ. ನೀವು ಇದನ್ನು ಅಧ್ಯಯನ ಕೊಠಡಿ ಅಥವಾ ಊಟದ ಸ್ಥಳವಾಗಿಯೂ ಬಳಸಬಹುದು.

ಮಹಿಳೆಯರ ಮೇಲೆ ಪ್ರಭಾವ:
ಉತ್ತರ ದಿಕ್ಕಿನ ಸ್ಥಾನ ಎತ್ತರವಾಗಿದ್ದರೆ ಆ ಮನೆಯ ಮಹಿಳೆಯರು ಪದೇ ಪದೇ ರೋಗಗ್ರಸ್ತರಾಗುವ ಸಾಧ್ಯತೆ ಇರುತ್ತದೆ. ಅಡುಗೆ ಮನೆಯ ಪಕ್ಕದಲ್ಲೇ ಸ್ನಾನದ ಮನೆ ಇದ್ದರೆ, ಸಹೋದರರ ನಡುವೆ ಪ್ರೀತಿ ಇರುತ್ತದೆಯಾದರೂ, ಮನೆಯ ಸ್ತ್ರೀಯರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿರುತ್ತವೆ.

ಸರಳ ಪರಿಹಾರ ಕ್ರಮಗಳು:
ವಾಸ್ತು ದೋಷವಿದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ, ಶಾಸ್ತ್ರದ ಪ್ರಕಾರ ಈ ಕೆಳಗಿನ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬಹುದು:

ಹಸಿರು ಬಣ್ಣ: ಮನೆಯ ಗೋಡೆಗಳಿಗೆ ಹಸಿರು ಬಣ್ಣ ಬಳಿಯುವುದು ಬುಧ ಗ್ರಹದ ಪ್ರಭಾವವನ್ನು ಹೆಚ್ಚಿಸುತ್ತದೆ.

ಬುಧ ಯಂತ್ರ: ದೇವರ ಕೋಣೆಯಲ್ಲಿ ‘ಬುಧ ಯಂತ್ರ’ವನ್ನಿಟ್ಟು ಪೂಜೆ ಮಾಡುವುದು ಹಾಗೂ ಬುಧವಾರದ ವ್ರತ ಆಚರಿಸುವುದು ಉತ್ತಮ.

ಗಿಳಿಯ ನಾದ: ಮನೆಯ ಪ್ರವೇಶ ದ್ವಾರದಲ್ಲಿ ಗಿಣಿ ಸಾಕಬಹುದು ಅಥವಾ ಗಿಣಿಯಂತೆ ಕೂಗುವ ‘ಕಾಲಿಂಗ್ ಬೆಲ್’ ಅಳವಡಿಸುವುದು ವಾಸ್ತು ದೋಷ ನಿವಾರಣೆಗೆ ಸಹಕಾರಿ.

ನಕಾರಾತ್ಮಕ ಶಕ್ತಿಯನ್ನು ಓಡಿಸಲು ತುಳಸಿ ಗಿಡವನ್ನು ಈಶಾನ್ಯ ಅಥವಾ ಉತ್ತರದ ಕಡೆಗೆ ಇರಿಸಿ. ಇದು ಧನಾತ್ಮಕ ಶಕ್ತಿಯಾಗಿ ಬದಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular