HomeLatest NewsT20 World Cup 2026: ವಿಂಡೀಸ್ vs ಜಿಂಬಾಬ್ವೆ ಸೂಪರ್ 8 ಸಮರ ಆರಂಭ; ಟಾಸ್...

T20 World Cup 2026: ವಿಂಡೀಸ್ vs ಜಿಂಬಾಬ್ವೆ ಸೂಪರ್ 8 ಸಮರ ಆರಂಭ; ಟಾಸ್ ಗೆದ್ದ ಜಿಂಬಾಬ್ವೆ

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಫೀಲ್ಡಿಂಗ್ ಆರಿಸಿಕೊಂಡಿದ್ದು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.

ಗ್ರೂಪ್ ಹಂತದಲ್ಲಿ ಎರಡೂ ತಂಡಗಳು ಸೋಲನ್ನೇ ಕಾಣದೇ ಸೂಪರ್ 8 ಪ್ರವೇಶಿಸಿದ್ದು, ಜಿಂಬಾಬ್ವೆ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಟೂರ್ನಿಯಿಂದ ಗ್ರೂಪ್ ಹಂತದಲ್ಲೇ ಹೊರಬೀಳುವಂತೆ ಮಾಡಿತ್ತು. ಅಲ್ಲದೇ ಸೋಲೇ ಇಲ್ಲದೇ ಮೆರೆಯುತ್ತಿದ್ದ ಶ್ರೀಲಂಕಾ ತಂಡವನ್ನೂ ಸಹ ಸೋಲಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಅಬ್ಬರಿಸಿದ್ದ ಜಿಂಬಾಬ್ವೆ ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೂ ಶಾಕ್ ನೀಡಲಿದೆಯಾ ಎಂಬುದು ಸದ್ಯದ ಕುತೂಹಲವಾಗಿದೆ.

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರಾಂಡನ್ ಕಿಂಗ್, ಶೈ ಹೋಪ್ (ನಾಯಕ ಹಾಗೂ ವಿಕೆಟ್ ಕೀಪರ್), ಶಿಮ್ರನ್ ಹೆಟ್‌ಮೇಯರ್, ರೊವ್‌ಮನ್ ಪೌವೆಲ್, ಶೆರ್ಫೇನ್ ರದರ್‌ಫರ್ಡ್, ರೊಮಾರಿಯೊ ಶೆಪರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಅಕೀಲ್ ಹೊಸೈನ್, ಗುಡಾಕೇಶ್ ಮೋಟಿ, ಶಮಾರ್ ಜೋಸೆಫ್

ಜಿಂಬಾಬ್ವೆ ಆಡುವ ಬಳಗ: ಬ್ರಿಯನ್ ಬೆನೆಟ್, ಟಡಿವನಾಶೆ ಮರುಮಾನಿ (ವಿಕೆಟ್ ಕೀಪರ್), ರಯಾನ್ ಬರ್ಲ್, ಸಿಕಂದರ್ ರಾಜಾ (ನಾಯಕ), ತಾಶಿಂಗಾ ಮುಸೆಕಿವಾ, ಟೋನಿ ಮುನ್ಯೋಂಗಾ, ಡಿಯಾನ್ ಮೈಯರ್ಸ್, ಬ್ರಾಡ್ ಎವಾನ್ಸ್, ಗ್ರೇಮ್ ಕ್ರೆಮರ್, ರಿಚರ್ಡ್ ನ್ಗರಾವಾ, ಬ್ಲೆಸಿಂಗ್ ಮುಜರಬಾನಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular