HomeLatest Newsಭಾರತದ ರಿಚ್ ಸರ್ಕಾರಿ ಉದ್ಯೋಗಗಳು: ಗರಿಷ್ಠ ಸಂಬಳ ಮತ್ತು ಗೌರವ ತರುವ ಟಾಪ್ 6 ಹುದ್ದೆಗಳ...

ಭಾರತದ ರಿಚ್ ಸರ್ಕಾರಿ ಉದ್ಯೋಗಗಳು: ಗರಿಷ್ಠ ಸಂಬಳ ಮತ್ತು ಗೌರವ ತರುವ ಟಾಪ್ 6 ಹುದ್ದೆಗಳ ವಿವರ

ಬೆಂಗಳೂರು: ಸರ್ಕಾರಿ ಕೆಲಸ ಸಿಕ್ಕರೆ ಜೀವನವೇ ಸೆಟ್ಲ್ ಅಂತಾರೆ ಸ್ಥಿರತೆ, ಸಮಾಜದಲ್ಲಿ ಗೌರವ ಭದ್ರತೆ ಜೊತೆಗೆ ಉತ್ತಮ ಸಂಬಳವೂ ಖಚಿತ.ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ಅಂದರೆ ಅದು ಕೇವಲ ಉದ್ಯೋಗವಲ್ಲ, ಅದೊಂದು ಜೀವನದ ಭದ್ರತೆ. ಸಮಾಜದಲ್ಲಿ ಗೌರವದ ಜೊತೆಗೆ ಲಕ್ಷ ಲಕ್ಷ ಸಂಬಳ ಪಡೆಯುವ ಅವಕಾಶ ಸಿಕ್ಕರೆ ಯಾರಿಗೆ ಬೇಡ ಹೇಳಿ? ಭಾರತದಲ್ಲಿ ಅತಿಹೆಚ್ಚು ವೇತನ ನೀಡುವ ಆರು ಪ್ರತಿಷ್ಠಿತ ಸರ್ಕಾರಿ ಹುದ್ದೆಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

1.ONGC ಮುಖ್ಯಸ್ಥರು (ONGC Chairman)
ದೇಶದ ಇಂಧನ ಭದ್ರತೆಯ ಜವಾಬ್ದಾರಿ ಹೊತ್ತಿರುವ ONGC ಸಂಸ್ಥೆಯ ಮುಖ್ಯಸ್ಥರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಅಧಿಕಾರಿಗಳಲ್ಲಿ ಒಬ್ಬರು.

ವೇತನ: ತಿಂಗಳಿಗೆ ₹60,000 ದಿಂದ ಆರಂಭವಾಗಿ ₹2,80,000 ವರೆಗೆ ಇರುತ್ತದೆ.ಕಚ್ಚಾ ತೈಲ ಶುದ್ಧೀಕರಣ ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಆದಾಯ ತರುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2.ಸೇನಾ ಮುಖ್ಯಸ್ಥರು (Chiefs of Indian Armed Forces)
ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ದೇಶದ ರಕ್ಷಣೆಯ ಅತ್ಯುನ್ನತ ಜವಾಬ್ದಾರಿ ಹೊಂದಿರುತ್ತಾರೆ.

ವೇತನ: ಆರಂಭಿಕ ₹56,100 ರಿಂದ ಗರಿಷ್ಠ ₹2,50,000 ವರೆಗೆ.ಸಂಬಳದ ಜೊತೆಗೆ ಇವರಿಗೆ ಸಿಗುವ ಸೌಲಭ್ಯಗಳು ಮತ್ತು ಗೌರವ ಅಪಾರ.

3.ಸುಪ್ರೀಂ ಕೋರ್ಟ್ ನ್ಯಾಯಾಧೀಶರು (Supreme Court Judges)
ದೇಶದ ನ್ಯಾಯಾಂಗ ವ್ಯವಸ್ಥೆಯ ಧ್ವನಿಯಾಗಿರುವ ಇವರು ಸಂವಿಧಾನದ ರಕ್ಷಕರು.

ವೇತನ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ತಿಂಗಳಿಗೆ ಸುಮಾರು ₹2,50,000 ಸಂಬಳ ಪಡೆಯುತ್ತಾರೆ.

4.ಭಾರತೀಯ ಆಡಳಿತ ಸೇವೆ (IAS)
ನಾಗರಿಕ ಸೇವೆಗಳಲ್ಲಿ ಅತ್ಯಂತ ಶಕ್ತಿಶಾಲಿ ಹುದ್ದೆಯಾದ IAS ಅಧಿಕಾರಿಗಳು ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಯ ಚುಕ್ಕಾಣಿ ಹಿಡಿಯುತ್ತಾರೆ.

ವೇತನ: ತಿಂಗಳಿಗೆ ₹56,100 ರಿಂದ ₹2,50,000 ವರೆಗೆ (ಕ್ಯಾಬಿನೆಟ್ ಸೆಕ್ರೆಟರಿ ಹಂತದಲ್ಲಿ).ಸರ್ಕಾರದ ನೀತಿ ನಿರೂಪಣೆ ಮತ್ತು ಜನ ಕಲ್ಯಾಣ ಯೋಜನೆಗಳ ಜಾರಿ.

5.ಭಾರತೀಯ ವಿದೇಶಾಂಗ ಸೇವೆ (IFS)
ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ರಾಜತಾಂತ್ರಿಕ ಅಧಿಕಾರಿಗಳು ಇವರು.

ವೇತನ: ತಿಂಗಳಿಗೆ ₹56,100 ರಿಂದ ₹2,50,000 ವರೆಗೆ.ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡುವುದು ಮತ್ತು ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸುವುದು.

6.ಭಾರತೀಯ ಪೊಲೀಸ್ ಸೇವೆ (IPS)
ಕಾನೂನು ಮತ್ತು ಸುವ್ಯವಸ್ಥೆಯ ಕಾವಲುಗಾರರಾದ ಐಪಿಎಸ್ ಅಧಿಕಾರಿಗಳು ಸಮಾಜದಲ್ಲಿ ಶಾಂತಿ ಕಾಪಾಡುತ್ತಾರೆ.

ವೇತನ: ತಿಂಗಳಿಗೆ ₹56,100 ರಿಂದ ₹2,25,000 ವರೆಗೆ.ಅಪರಾಧ ತಡೆಗಟ್ಟುವುದು ಮತ್ತು ಪೊಲೀಸ್ ವ್ಯವಸ್ಥೆಯ ನಿರ್ವಹಣೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular