HomeKarnatakaಇನ್ನು ಮುಂದೆ ರಾಜ್ಯದ ಕೆರೆಗಳ ಬಫರ್‌ ಜೋನ್ ಕಡಿತ: ಕೆರೆಗಳ ಸಂರಕ್ಷಿತ ಪ್ರದೇಶ ಕಡಿತಕ್ಕೆ ರಾಜ್ಯಪಾಲರ...

ಇನ್ನು ಮುಂದೆ ರಾಜ್ಯದ ಕೆರೆಗಳ ಬಫರ್‌ ಜೋನ್ ಕಡಿತ: ಕೆರೆಗಳ ಸಂರಕ್ಷಿತ ಪ್ರದೇಶ ಕಡಿತಕ್ಕೆ ರಾಜ್ಯಪಾಲರ ಅಂಕಿತ: ಕಾಯ್ದೆ ಅಧಿಕೃತವಾಗಿ ಜಾರಿಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ಕೆರೆಗಳ ಸಂರಕ್ಷಿತ ಪ್ರದೇಶ(ಬಫರ್ ವಲಯ) ಕಡಿತಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿದ್ದು, ಬಫರ್ ವಲಯದ ಪ್ರಮಾಣ ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ಅಧಿನಿಯಮ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ ಬೆನ್ನಲ್ಲೇ ಬೆನ್ನಲ್ಲೇ ಈ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೊಳಿಸಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

ಇನ್ನು ಮುಂದೆ ರಾಜ್ಯದ ಕೆರೆಗಳ ಬಫರ್‌ಜೋನ್ ಈ ಮೊದಲಿಗಿಂತ ಕಡಿಮೆಯಾಗಲಿದೆ. ಜೊತೆಗೆ ಹೊಸ ಬಫರ್ ಜೋನ್ ವಲಯದಲ್ಲಿ ರಸ್ತೆಗಳು, ಸೇತು ವೆಗಳು, ಕೆರೆದಂಡೆ ಕೆಳಗೆ ನೀರು ಸರಬರಾಜುಮಾರ್ಗಗಳು, ವಿದ್ಯುತ್ ಕಂಬಗಳಿಗೆ ಆಧಾರ ಪೀಠಗಳು, ಹೈಟೆನ್ನನ್ ಗೋಪುರಗಳು, ಕೆರೆ ಭೂಮಿ ಅಥವಾ ಅದರ ಭಾಗವ ನ್ನೊಳಗೊಂಡು ಕೆರೆ ಪ್ರದೇಶದೊಳಗೆ ದಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಈ ಕಾಮಗಾರಿಗಳಿಂದ ಕೆರೆಗಳ ಮೂಲ ಸಾಮರ್ಥ್ಯ ಕಡಿಮೆಯಾಗಬಾರದು. ಕೆರೆಗಳ ನೀರು ಹರಿವಿನ ವಿರುದ್ಧವಾಗಿ, ನೀರು ಹರಿವಿನ ಕಡೆಗೆ ಕರೆಗಳಿಂದ ಅಥವಾ ಕೆರೆಗಳಿಗೆ ನೀರಿನ ಒಳ ಹರಿವು, ಹೊರ ಹರಿವಿನ ಸ್ವಾಭಾವಿಕ ಹರಿವಿಗೆ ಯಾವುದೇ ಅಡ್ಡಿ ಯುಂಟಾಗುವುದಿಲ್ಲ ಎಂದು ಪ್ರಾಧಿಕಾರ ಖಚಿತಪಡಿಸಿಕೊಂಡು ಕಾಮಗಾರಿ ಕೈಗೊಳ್ಳಬಹುದು.

ಕೆರೆಗಳ ಬಫರ್ ವಲಯ: ಹೊಸದಾಗಿ ನಿರ್ದಿಷ್ಟಪ ಡಿಸಿರುವಂತೆ ಕೆರೆಯು 0.05ರಿಂದ ಮೇಲ್ಪಟ್ಟು 0.10 ಗುಂಟೆವರೆಗೆ ಇದ್ದರೆ 1 ಮೀಟರ್ ಬಫರ್ ವಲಯ, 0.10 ಗುಂಟೆ ಯಿಂದ 1 ಎಕರೆವರೆಗೆ 3 ಮೀಟರ್, 1 ರಿಂದ 10 ಎಕರೆ ವರೆಗೆ 6 ಮೀಟರ್, 10ರಿಂದ 25 ಎಕರೆವರೆಗೆ ಇದ್ದರೆ 12 ಮೀಟರ್, 25ರಿಂದ 100 ಎಕರೆವರೆಗೆ 24 ಮೀಟರ್ ಮತ್ತು 100 ಎಕರೆಗಿಂತ ಮೇಲ್ಪಟ್ಟು 30 ಮೀಟರ್‌ಬಫರ್‌ವಲಯ ಎಂದು ನಿಗದಿಪಡಿಸಲಾಗಿದೆ.

ಈ ಹಿಂದೆ ಕೆರೆ, ರಾಜಕಾಲುವೆ ಒಳಗೊಂಡು ಜಲಮೂಲಗಳ ಬಫರ್ ಜೋನ್ ಅನ್ನು 30 ಮೀಟರ್‌ಗೆ ಕಡಿತಗೊಳಿಸಿ ಮತ್ತು ಬಫರ್‌ಜೋನ್‌ನಲ್ಲಿ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರ ಲರ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು. ಕೆಲ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕಿರಲಿಲ್ಲ. ಸರ್ಕಾರ ವಿಧೇಯಕದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸ್ಪಷ್ಟನೆ ನೀಡಿದ್ದರಿಂದ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular