ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಆರ್.ಎಲ್. ಜಾಲಪ್ಪ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುವುದು.
ಕೆಎಎಸ್, ಪಿಎಸ್ಐ, ಎಸ್‌ಡಿಎ, ಎಫ್.ಡಿ.ಎ. ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಚ್ 1ರಿಂದ ಉಚಿತ ತರಬೇತಿ ನೀಡಲಿದ್ದು, ಬಡ ಮತ್ತು ಗ್ರಾಮೀಣ ಯುವಕರಿಗೆ ನಾಲ್ಕು ತಿಂಗಳ ಉಚಿತ ತರಬೇತಿ ಇದಾಗಿರುತ್ತದೆ. ಹೊರ ಊರಿನ ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.
ತರಬೇತಿ ಪಡೆಯಬಯಸುವ ಆಸಕ್ತರು ಫೆಬ್ರವರಿ 25ರೊಳಗೆ www.rljacademy.in ಮೂಲಕ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ 99006 06042, 97314 80759 ಸಂಪರ್ಕಿಸುವಂತೆ ಆರ್.ಎಲ್. ಜಾಲಪ್ಪ ಅಕಾಡೆಮಿ ಕಾರ್ಯದರ್ಶಿ ಲಕ್ಷ್ಮಣ ಕೊಡಸೆ ತಿಳಿಸಿದ್ದಾರೆ.

