HomeSportsT20 World Cup 2026: ಪತುಮ್ ನಿಸ್ಸಂಕ ಶತಕದ ಆರ್ಭಟಕ್ಕೆ ಆಸ್ಟ್ರೇಲಿಯಾ ತತ್ತರ; ಸೂಪರ್‌ 8...

T20 World Cup 2026: ಪತುಮ್ ನಿಸ್ಸಂಕ ಶತಕದ ಆರ್ಭಟಕ್ಕೆ ಆಸ್ಟ್ರೇಲಿಯಾ ತತ್ತರ; ಸೂಪರ್‌ 8 ಸುತ್ತಿಗೆ 5ನೇ ತಂಡ ಎಂಟ್ರಿ

ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 30ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಪತುಮ್ ನಿಸ್ಸಂಕ ಅಜೇಯ ಶತದ ನೆರವಿನಿಂದ 8 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಕಂಡು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಸೂಪರ್ 8ಗೆ ಲಗ್ಗೆ ಇಟ್ಟ ಐದನೇ ತಂಡ ಎನಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡಿದ್ದು, ಆಸ್ಟ್ರೇಲಿಯಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ 20 ಓವರ್‌ಗಳಲ್ಲಿ 181 ರನ್ ಕಲೆಹಾಕಿ ಆಲ್‌ಔಟ್ ಅಗಿ ಶ್ರೀಲಂಕಾಗೆ 182 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 18 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ತಲಾ ಅರ್ಧಶತಕ ಬಾರಿಸಿ ಶತಕದ ಜತೆಯಾಟವನ್ನಾಡಿದರು. ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 56 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 27 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿದರು. ಹೀಗೆ ಉತ್ತಮ ಆರಂಭ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ಪರ ನಂತರ ಕಣಕ್ಕಿಳಿದ ಕ್ಯಾಮೆರಾನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಕ್ಯಾಮೆರಾನ್ ಗ್ರೀನ್ 3 ರನ್, ಟಿಮ್ ಡೇವಿಡ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಜೋಶ್ ಇಂಗ್ಲಿಸ್ 27, ಗ್ಲೆನ್ ಮ್ಯಾಕ್ಸ್‌ವೆಲ್ 22, ಕೂಪರ್ ಕೋನೊಲಿ 3, ಮಾರ್ಕಸ್ ಸ್ಟೊಯಿನಿಸ್ 4, ಕ್ಷೇವಿಯರ್ ಬಾರ್ಟ್ಲೆಟ್ ಡಕ್‌ಔಟ್, ಆಡಂ ಜಂಪಾ 1 ರನ್ ಹಾಗೂ ನೇಥನ್ ಎಲ್ಲಿಸ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ಮೊದಲ ವಿಕೆಟನ್ನು 8.3 ಓವರ್‌ನಲ್ಲಿ 104 ರನ್ ಗಳಿಸಿದ್ದಾಗ ಕಳೆದುಕೊಂಡ ಆಸ್ಟ್ರೇಲಿಯಾ ನಂತರ ಸಾಲು ಸಾಲಾಗಿ ವಿಕೆಟ್ ಕಳೆದುಕೊಂಡು ತಮ್ಮ ಕಡೆಯಿದ್ದ ಪಂದ್ಯವನ್ನು ಬೃಹತ್ ಮೊತ್ತವಾಗಿ ಪರಿವರ್ತನೆ ಮಾಡುವಲ್ಲಿ ಎಡವಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಲಂಕಾ ಪರ ದುಶನ್ ಹೇಮಂತ ಮೂರು ವಿಕೆಟ್, ದುಷ್ಮಂತ ಚಮೀರ ಎರಡು ವಿಕೆಟ್, ದುನಿತ್ ವೆಲ್ಲಾಲಗೆ, ಮಹೀಶ ತೀಕ್ಷಣ ಹಾಗೂ ಕಮಿಂದು ಮೆಂಡಿಸ್ ತಲಾ ಒಂದೊಂದು ವಿಕೆಟ್ ಪಡೆದರು.

ಶ್ರೀಲಂಕಾ ಇನ್ನಿಂಗ್ಸ್: ಆಸ್ಟ್ರೇಲಿಯಾ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಕೇವಲ 8 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಕುಸಾಲ್ ಪೆರೆರಾ ಕೇವಲ 1 ರನ್ ಗಳಿಸಿ ಔಟ್ ಆದರು. ನಂತರ ಎರಡನೇ ವಿಕೆಟ್‌ಗೆ ಜತೆಯಾದ ಪತುಮ್ ನಿಸ್ಸಂಕ ಹಾಗೂ ಕುಸಾಲ್ ಮೆಂಡಿಸ್ 97 ರನ್‌ಗಳ ಜತೆಯಾಟವನ್ನಾಡಿ ಆಸ್ಟ್ರೇಲಿಯಾ ಕೈನಿಂದ ಪಂದ್ಯವನ್ನು ಕಿತ್ತುಕೊಂಡರು. ಕುಸಾಲ್ ಮೆಂಡಿಸ್ 51 ರನ್‌ಗೆ ವಿಕೆಟ್ ಒಪ್ಪಿಸಿದರೆ, ಆರಂಭಿಕನಾಗಿ ಕಣಕ್ಕಿಳಿದು ಕಾಂಗರೂಗಳ ಪಾಲಿಗೆ ಸಿಂಹಸ್ವಪ್ನವಾದ ಪತುಮ್ ನಿಸ್ಸಂಕ 52 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿ ಅಬ್ಬರಿಸಿದರು. ಪವನ್ ರತ್ನಾಯಕೆ ಅಜೇಯ 28 ರನ್ ಬಾರಿಸಿದರು.

ಶ್ರೀಲಂಕಾ ಬ್ಯಾಟಿಂಗ್‌ಗೆ ಹೈರಾಣಾದ ಆಸ್ಟ್ರೇಲಿಯಾ ಕೇವಲ ಎರಡು ವಿಕೆಟ್‌ ಮಾತ್ರ ಕಬಳಿಸಿತು. ಆ ಎರಡು ವಿಕೆಟ್‌ ಸಹ ಮಾರ್ಕಸ್ ಸ್ಟೊಯಿನಿಸ್‌ಗೆ ದೊರಕಿತು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular