HomeLatest NewsT20 World Cup 2026: ಅಬ್ಬಬ್ಬಾ ನೀನೇನು ಮನುಷ್ಯನಾ, ಪಕ್ಷಿನಾ ಗುರು? ಟೂರ್ನಿಯ ಬೆಸ್ಟ್ ಕ್ಯಾಚ್...

T20 World Cup 2026: ಅಬ್ಬಬ್ಬಾ ನೀನೇನು ಮನುಷ್ಯನಾ, ಪಕ್ಷಿನಾ ಗುರು? ಟೂರ್ನಿಯ ಬೆಸ್ಟ್ ಕ್ಯಾಚ್ ಪಡೆದ ನಿಸ್ಸಾಂಕಾ; ವಿಡಿಯೊ

ಕ್ಯಾಂಡಿಯ ಪಲ್ಲೆಕೆಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 30ನೇ ಪಂದ್ಯದಲ್ಲಿ ಬಿ ಗುಂಪಿನ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿತು. ಅದರಂತೆ ಆಸ್ಟ್ರೇಲಿಯಾ ಅಬ್ಬರದ ಆರಂಭ ಪಡೆದು ನಂತರ ಕುಸಿತ ಕಂಡು 20 ಓವರ್‌ಗಳಲ್ಲಿ 181 ರನ್‌ಗೆ ಆಲ್‌ಔಟ್ ಆಗಿ ಶ್ರೀಲಂಕಾಗೆ 182 ರನ್‌ಗಳ ಗುರಿಯನ್ನು ನೀಡಿದೆ.

ಆಸ್ಟ್ರೇಲಿಯಾ ಪರ ಆರಂಭಿರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ತಲಾ ಅರ್ಧಶತಕ ಬಾರಿಸಿ ಶತಕದ ಜತೆಯಾಟವನ್ನಾಡಿದರು. ಈ ಇಬ್ಬರ ವಿಕೆಟ್ ಉರುಳಿದ ಬಳಿಕ ಬೆನ್ನಲ್ಲೇ ಕೆಮರಾನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಆಸ್ಟ್ರೇಲಿಯಾ 130 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಈ ಸಮಯದಲ್ಲಿ ಕಣಕ್ಕಿಳಿದ ಹಿರಿಯ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ತಂಡವನ್ನು ಸುಧಾರಿಸುವ ಜವಾಬ್ದಾರಿ ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮ್ಯಾಕ್ಸ್‌ವೆಲ್ ನಿಧಾನವಾಗಿ ಆಟವನ್ನಾರಂಭಿಸಿ ನಂತರ ಒಂದು ಸಿಕ್ಸರ್, ಒಂದು ಬೌಂಡರಿ ಬಾರಿಸಿ 15 ರನ್‌ಗೆ 22 ರನ್ ಕಲೆಹಾಕಿ ದುಶನ್ ಹೇಮಂತ ಎಸೆದ 17ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಹೇಮಂತ ಎಸೆದ ಎಸೆತಕ್ಕೆ ಬ್ಯಾಟಿಂಗ್ ಸ್ವಿಚ್ ಮಾಡಿ ಬ್ಯಾಕ್‌ವರ್ಡ್ ಪಾಯಿಂಟ್‌ಗೆ ಬೌಂಡರಿ ಬಾರಿಸಲು ಯತ್ನಿಸಿದರು. ಆದರೆ ಪತುಮ್ ನಿಸ್ಸಂಕ ಗಾಳಿಯಲ್ಲಿ ಎಗರಿ ರೋಮಾಂಚಕಾರಿ ಕ್ಯಾಚ್ ಪಡೆದರು. ಸದ್ಯ ಈ ಕ್ಯಾಚ್ ಟೂರ್ನಿಯಲ್ಲಿ ಇಲ್ಲಿಯವರೆಗಿನ ಬೆಸ್ಟ್ ಕ್ಯಾಚ್ ಎನಿಸಿಕೊಂಡಿದೆ. ಕ್ರಿಕೆಟ್ ಪ್ರಿಯರು ಈ ಕ್ಯಾಚ್‌ನ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡಿದ್ದು, ಈತ ಮನುಷ್ಯಾನಾ, ಪಕ್ಷಿನಾ ಎಂದು ಕ್ಯಾಷ್ಷನ್ ಬರೆದುಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular