ಜಿಲ್ಲಾ ಪಂಚಾಯತ್ ಹಾವೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅಡಿ ಜಿಲ್ಲೆಯಲ್ಲಿ ಮಂಜೂರಾಗಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದೆ.
ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನ ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ. ನೇರ ಸಂದರ್ಶನ ಬೆಳಗ್ಗೆ 10.30 ರಿಂದ ಸಂಜೆ 5.30ರ ತನಕ ನಡೆಯಲಿದೆ. ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಬಿ.ಬ್ಲಾಕ್ ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಛೇರಿ ಆವರಣ, ಜಿಲ್ಲಾ ಆಡಳಿತ ಭವನ ದೇವಗಿರಿ ಹಾವೇರಿ ಇಲ್ಲಿ ವಿತರಿಸಲಾಗುವುದು.
ಅದೇ ದಿನ ಸದರಿ ಅರ್ಜಿಗಳನ್ನು ಭರ್ತಿ ಮಾಡಿ ಪಡೆದುಕೊಳ್ಳಲಾಗುವುದು. ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳ ದೃಢಿಕರಿಸಿದ ಝೆರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತಿಚಿನ ಭಾವಚಿತ್ರದ 2 ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ಆನ್ಲೈನ್ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹುದ್ದೆಗಳ ವಿವರಗಳನ್ನು ನೀಡಲಾಗಿದೆ.
ಅರವಳಿಕೆ ತಜ್ಞ ವೈದ್ಯರು 2 ಹುದ್ದೆಗಳು ಹಾಗೂ ಇ.ಎನ್.ಟಿ ತಜ್ಞ ವೈದ್ಯರು 1 ಹುದ್ದೆ ಅರ್ಜಿಗಳನ್ನು ಪ್ರತಿ ದಿನ ಕಛೇರಿ ಅವಧಿಯಲ್ಲಿ ಹುದ್ದೆಗಳು ಭರ್ತಿಯಾಗುವ ವರೆಗೆ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಳು ಕಛೇರಿಗೆ ಬಂದು ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ಭರ್ತಿಮಾಡಿ ಕೊಳ್ಳಲಾಗುವುದು.
ಹುದ್ದೆಗಳ ವಿವರ
- ಎಂಬಿಬಿಎಸ್ ವೈದ್ಯಾಧಿಕಾರಿಗಳು 34 ಹುದ್ದೆ, 19/2/2026
- ಎಂಬಿಬಿಎಸ್ ವೈದ್ಯಾಧಿಕಾರಿಗಳು (ಎನ್ಟಿಇಪಿ) 1 ಹುದ್ದೆ,19/2/2026
- ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ 10 ಹುದ್ದೆ, 20/2/2026
- ಶುಶ್ರೂಷಾಧಿಕಾರಿಗಳು 28 ಹುದ್ದೆ, 19/2/2026
- ಶುಶ್ರೂಷಾಧಿಕಾರಿಗಳು (ನಮ್ಮ ಕ್ಲಿನಿಕ್) 3 ಹುದ್ದೆ, 20/2/2026
- ಶುಶ್ರೂಷಾಧಿಕಾರಿಗಳು (ಎನ್ಪಿಸಿಸಿ) 3 ಹುದ್ದೆ, 20/2/2026
- ಶುಶ್ರೂಷಾಧಿಕಾರಿಗಳು (ಎನ್ಡಿಸಿಡಿಎಸ್) 2 ಹುದ್ದೆ, 20/2/2026
- ಮಕ್ಕಳ ಆರೋಗ್ಯ ಸಮಾಲೋಚಕರು 1 ಹುದ್ದೆ, 21/2/2026
- ಬಯೋ ಮೆಡಿಕಲ್ ಇಂಜಿನಿಯರ್ 1 ಹುದ್ದೆ, 21/2/2026
- ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ 1 ಹುದ್ದೆ. 19/2/2026

