ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ಮತ್ತೊಂದು ಭಾರಿ ಸೋಲನ್ನು ಅನುಭವಿಸಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಮನೆಯಲ್ಲಿದ್ದ ದೂರದರ್ಶನ (ಟಿವಿ) ಸೆಟ್ ಅನ್ನು ಹೊಡೆದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಲೊಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 61 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರ ಈ ಘಟನೆ ನಡೆದಿದೆ.
ಮೊದಲು ಬ್ಯಾಟ್ ಮಾಡಿದ ಭಾರತ, ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 176 ರನ್ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಭಾರತದ ಶಿಸ್ತುಬದ್ಧ ಬೌಲಿಂಗ್ಗೆ ತತ್ತರಿಸಿತು. ಕೇವಲ 18 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.
ಅಭಿಮಾನಿಯ ಆಕ್ರೋಶ: ಪಂದ್ಯದ ಸೋಲಿನ ಹತಾಶೆಯಲ್ಲಿ ಅಭಿಮಾನಿಯೊಬ್ಬ ತನ್ನ ಟಿವಿಯನ್ನು ಒಡೆದು ಹಾಕುತ್ತಿರುವ ದೃಶ್ಯವು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.
ಪಾಕಿಸ್ತಾನವನ್ನು ಅಣಕಿಸಿದ ಆಸ್ಟ್ರೇಲಿಯಾ ಅಭಿಮಾನಿ
ಪಾಕಿಸ್ತಾನದ ಈ ಹೀನಾಯ ಸೋಲನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿ ಜೇಕ್ ಜೀಕಿಂಗ್ಸ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಅಣಕಿಸಿದ್ದಾರೆ.ಜೇಕ್ ಜೀಕಿಂಗ್ಸ್ ಅವರು ತಮ್ಮ ವಿಡಿಯೋದಲ್ಲಿ ಬಾಯಿ ಮುಚ್ಚಿಕೊಳ್ಳುವಂತೆ (Zip your mouth) ಸನ್ನೆ ಮಾಡುವ ಮೂಲಕ ಪಾಕಿಸ್ತಾನದ ಕಳಪೆ ಪ್ರದರ್ಶನವನ್ನು ಲೇವಡಿ ಮಾಡಿದ್ದಾರೆ.ಈ ವಿಡಿಯೋಗೆ ಕೆಲವರು ಇದು ಕೇವಲ ಕ್ರೀಡಾ ಮನೋಭಾವದ ತಮಾಷೆ ಎಂದಿದ್ದರೆ, ಪಾಕಿಸ್ತಾನಿ ಅಭಿಮಾನಿಗಳು ಇದು ಗಾಯದ ಮೇಲೆ ಉಪ್ಪು ಸವರಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಕೇವಲ ಆಟವಾಗಿ ಉಳಿಯದೆ, ಗಡಿಗಳನ್ನು ಮೀರಿ ಅಭಿಮಾನಿಗಳ ಭಾವನೆಗಳೊಂದಿಗೆ ಬೆರೆತಿರುತ್ತವೆ ಎಂಬುದು ಈ ಘಟನೆಗಳಿಂದ ಮತ್ತೊಮ್ಮೆ ಸಾಬೀತಾಗಿದೆ.

