HomeIndiaಚೆಕ್ ಬೌನ್ಸ್ ,  EMI ಬಾಕಿ ಉಳಿಸಿಕೊಂಡ್ರೆ 'ಜೈಲು ಶಿಕ್ಷೆ' ಆಗುತ್ತಾ ? ಕಾನೂನು ಏನು...

ಚೆಕ್ ಬೌನ್ಸ್ ,  EMI ಬಾಕಿ ಉಳಿಸಿಕೊಂಡ್ರೆ ‘ಜೈಲು ಶಿಕ್ಷೆ’ ಆಗುತ್ತಾ ? ಕಾನೂನು ಏನು ಹೇಳುತ್ತೆ ತಿಳಿಯಿರಿ

ವಿವಿಧ ಕಾರಣಗಳಿಂದಾಗಿ ಚೆಕ್‌’ಗಳು ಬೌನ್ಸ್ ಆಗುತ್ತವೆ. ಅನೇಕರು ಇದನ್ನು ಸಣ್ಣ ತಪ್ಪು ಎಂದು ಭಾವಿಸುತ್ತಾರೆ, ಆದರೆ ಇದರ ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ. ಕಾನೂನಿನ ಪ್ರಕಾರ ಚೆಕ್ ಬೌನ್ಸ್ ಆದಾಗ ಏನು ಸಂಭವಿಸುತ್ತದೆ ಇಲ್ಲಿದೆ ಮಾಹಿತಿ. ಸಾಲ ಕಟ್ಟದಿದ್ದರೆ ತಕ್ಷಣ ಜೈಲಿಗೆ ಹಾಕುತ್ತಾರೆ ಎಂಬ ಭಯ ಮತ್ತು ತಪ್ಪು ಕಲ್ಪನೆ ಜನರಲ್ಲಿರುತ್ತದೆ. ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು.

ಚೆಕ್ ಬೌನ್ಸ್ ಕಾನೂನು ಕ್ರಮಗಳ ಪರಿಶೀಲನೆ

  • ರಿಟರ್ನ್ ಮೆಮೊ (Return Memo): ಇದು ಅತ್ಯಂತ ಪ್ರಮುಖ ದಾಖಲೆ. ಇದರಲ್ಲಿ ಚೆಕ್ ಬೌನ್ಸ್ ಆಗಲು ಕಾರಣ (ಉದಾಹರಣೆಗೆ: ‘Insufficient Funds’ ಅಥವಾ ‘Signature Mismatch’) ನಮೂದಾಗಿರುತ್ತದೆ. ಮೆಮೊ ಮೇಲೆ ಇರುವ ದಿನಾಂಕದಿಂದಲೇ ಕಾಲಮಿತಿ (Limitation period) ಆರಂಭವಾಗುತ್ತದೆ.
  • ಲೀಗಲ್ ನೋಟಿಸ್ ಕಾಲಮಿತಿ: ಚೆಕ್ ಬೌನ್ಸ್ ಆದ (ಮೆಮೊ ಬಂದ) 30 ದಿನಗಳ ಒಳಗಾಗಿ ನೋಟಿಸ್ ಕಳುಹಿಸಲೇಬೇಕು. ಒಂದು ದಿನ ವಿಳಂಬವಾದರೂ ಕೇಸ್ ವೀಕ್ ಆಗುವ ಸಾಧ್ಯತೆ ಇರುತ್ತದೆ.
  • 15 ದಿನಗಳ ಕಾಯುವಿಕೆ: ನೋಟಿಸ್ ನೀಡಿದ ತಕ್ಷಣ ಕೇಸ್ ಹಾಕುವಂತಿಲ್ಲ. ಕಾನೂನಿನ ಪ್ರಕಾರ ಅವರಿಗೆ ಹಣ ತೀರಿಸಲು 15 ದಿನಗಳ ‘Grace Period’ ನೀಡಲೇಬೇಕು.
  • ದೂರು ಸಲ್ಲಿಕೆ (Filing Complaint): ಆ 15 ದಿನಗಳು ಮುಗಿದ ನಂತರದ 30 ದಿನಗಳ ಒಳಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕು.

ಪ್ರಮುಖ ಮುನ್ನೆಚ್ಚರಿಕೆಗಳು

  • ಸಿಬಿಲ್ ಸ್ಕೋರ್ : ಚೆಕ್ ಬೌನ್ಸ್ ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ತೀವ್ರವಾಗಿ ಕುಸಿಯುತ್ತದೆ, ಇದರಿಂದ ಭವಿಷ್ಯದಲ್ಲಿ ಬ್ಯಾಂಕ್ ಸಾಲ ಸಿಗುವುದು ಕಷ್ಟವಾಗುತ್ತದೆ.
  • ಬ್ಯಾಂಕ್ ಶುಲ್ಕ: ಪ್ರತಿ ಬಾರಿ ಚೆಕ್ ಬೌನ್ಸ್ ಆದಾಗಲೂ ಬ್ಯಾಂಕ್ ನಿಮ್ಮ ಖಾತೆಯಿಂದ ದಂಡದ ರೂಪದಲ್ಲಿ ಹಣ ಕಡಿತಗೊಳಿಸುತ್ತದೆ (ಸಾಮಾನ್ಯವಾಗಿ ₹250 ರಿಂದ ₹750 ವರೆಗೆ).

ಚೆಕ್ ಬೌನ್ಸ್ , EMI ಕಟ್ಟದೆ ತಪ್ಪಿಸಿಕೊಂಡ್ರೆ ಜೈಲು ಶಿಕ್ಷೆ ಆಗುತ್ತಾ ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಜೈಲು ಶಿಕ್ಷೆ ಮತ್ತು ದಂಡ (ಸೆಕ್ಷನ್ 138)

ಕಾನೂನಿನ ಪ್ರಕಾರ, ಒಂದು ವೇಳೆ ನಿಮ್ಮ ಚೆಕ್ ಬೌನ್ಸ್ ಆದಾಗ ಎದುರು ಸಕ್ಷದವರು (ಹಣ ಪಡೆಯಬೇಕಾದವರು) ನಿಮಗೆ ಲೀಗಲ್ ನೋಟಿಸ್ ಕಳುಹಿಸಬಹುದು. ನೋಟಿಸ್ ಬಂದ 15 ದಿನಗಳ ಒಳಗೆ ನೀವು ಹಣ ಪಾವತಿಸದಿದ್ದರೆ, ನಿಮ್ಮ ವಿರುದ್ಧ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಇದರ ಅಡಿಯಲ್ಲಿ ನಿಮಗೆ:

  • 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
  • ಚೆಕ್‌ನಲ್ಲಿರುವ ಮೊತ್ತದ ಎರಡರಷ್ಟು ದಂಡ ವಿಧಿಸಬಹುದು.
  • ಅಥವಾ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸುವ ಅವಕಾಶವಿದೆ.

2. ಬ್ಯಾಂಕ್ ಶುಲ್ಕಗಳ ಹೊರೆ

ಚೆಕ್ ಬೌನ್ಸ್ ಆದ ತಕ್ಷಣ ಕಾನೂನು ಕ್ರಮಕ್ಕಿಂತ ಮುಂಚಿತವಾಗಿ ಬ್ಯಾಂಕ್ ಶುಲ್ಕಗಳು ಆರಂಭವಾಗುತ್ತವೆ. ಚೆಕ್ ಅಥವಾ NACH (SIP ನಂತಹ ಆಟೋ ಡೆಬಿಟ್) ವಿಫಲವಾದರೆ, ಬ್ಯಾಂಕ್ ಪ್ರತಿ ಬೌನ್ಸ್‌ಗೆ ₹250 ರಿಂದ ₹750 ವರೆಗೆ ಜರಿಮಾನೆ ವಿಧಿಸಬಹುದು. ಇಎಂಐ, ಬಾಡಿಗೆ ಅಥವಾ ಕ್ರೆಡಿಟ್ ಕಾರ್ಡ್ ಪಾವತಿ ವಿಫಲವಾದರೆ, ಹೆಚ್ಚುವರಿ ಬೌನ್ಸ್ ಶುಲ್ಕಗಳು, ವಿಳಂಬ ಶುಲ್ಕ (Late fees) ಮತ್ತು ಬಡ್ಡಿಯನ್ನು ಸಹ ಸೇರಿಸಲಾಗುತ್ತದೆ. ಅಂದರೆ ನೀವು ಸತತ 3 ಬಾರಿ ಪಾವತಿ ವಿಫಲವಾದರೆ, ಕಾನೂನು ಕ್ರಮಕ್ಕೂ ಮುನ್ನವೇ ನಿಮಗೆ ಸುಮಾರು ₹2 ರಿಂದ 3 ಸಾವಿರ ನಷ್ಟವಾಗಬಹುದು.

3. ಸಿಬಿಲ್ (CIBIL) ಸ್ಕೋರ್ ಮೇಲೆ ಪರಿಣಾಮ

ನೀವು ನಿಮ್ಮ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಸಾಲ ನೀಡಿದ ಸಂಸ್ಥೆಯು ನಿಮ್ಮನ್ನು ‘ಡಿಫಾಲ್ಟರ್’ ಎಂದು ಗುರುತಿಸುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರನ್ನು (CIBIL) 50 ರಿಂದ 70 ಪಾಯಿಂಟ್‌ಗಳವರೆಗೆ ಕುಸಿಯುವಂತೆ ಮಾಡಬಹುದು. ಕೇವಲ ಒಂದು ಇಎಂಐ ತಪ್ಪಿದರೂ ನಿಮ್ಮ ಕ್ರೆಡಿಟ್ ಹಿಸ್ಟರಿ ಹಾಳಾಗುತ್ತದೆ, ಇದರಿಂದ ಭವಿಷ್ಯದಲ್ಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಕಷ್ಟವಾಗುತ್ತದೆ.

4. ಆಟೋ-ಡೆಬಿಟ್ ಮತ್ತು ಕಾನೂನು

ಗಮನಿಸಬೇಕಾದ ಸಂಗತಿಯೆಂದರೆ, ಸೆಕ್ಷನ್ 138 ರ ಪ್ರಕಾರ ಕೇವಲ ಚೆಕ್ ಬೌನ್ಸ್ ಆಗುವುದು ಮಾತ್ರ ಕ್ರಿಮಿನಲ್ ಅಪರಾಧವಾಗಿದೆ. ಆಟೋ-ಡೆಬಿಟ್ (ECS/NACH) ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗುವುದು ಸಾಮಾನ್ಯವಾಗಿ ಕ್ರಿಮಿನಲ್ ಅಪರಾಧವಲ್ಲ. ಆದರೆ ಇದು ನಿಮಗೆ ಆರ್ಥಿಕವಾಗಿ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಮತ್ತು ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಗಮನಿಸಿ: ಚೆಕ್ ನೀಡುವಾಗ ಸಹಿ ತಪ್ಪಾಗಿದ್ದರೆ ಅಥವಾ ದಿನಾಂಕದ ವ್ಯತ್ಯಾಸವಿದ್ದರೂ ಬೌನ್ಸ್ ಆಗಬಹುದು. ಆದರೆ ಹಣದ ಕೊರತೆಯಿಂದ (Insufficient Funds) ಬೌನ್ಸ್ ಆಗುವುದು ಅತಿ ದೊಡ್ಡ ಅಪರಾಧ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular