HomeLatest NewsLuxury Watch:ಭಾರತದಲ್ಲಿ ಕೇವಲ 3 ಜನರ ಬಳಿ ಮಾತ್ರ ಇದೆ ಈ ಅಪರೂಪದ ಗಡಿಯಾರ ಇದರ...

Luxury Watch:ಭಾರತದಲ್ಲಿ ಕೇವಲ 3 ಜನರ ಬಳಿ ಮಾತ್ರ ಇದೆ ಈ ಅಪರೂಪದ ಗಡಿಯಾರ ಇದರ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಕೇವಲ 70 ರೂಪಾಯಿ ಅಥವಾ 70 ಸಾವಿರವಲ್ಲ, ಬರೋಬ್ಬರಿ 70 ಕೋಟಿ ರೂಪಾಯಿ ಹೌದು ಒಂದು ವಾಚ್‌ನ ಬೆಲೆ ಇಷ್ಟಿರಲು ಸಾಧ್ಯವೇ ಎಂದು ನೀವು ಅಚ್ಚರಿ ಪಡಬಹುದು. ಆದರೆ, ವಿಶ್ವವಿಖ್ಯಾತ ಪಾಟೆಕ್ ಫಿಲಿಪ್ (Patek Philippe) ಕಂಪನಿಯ ರೈನ್ಬೋ ಮಿನಿಟ್ ರಿಪೀಟರ್ ಎನ್ನುವ ಗಡಿಯಾರ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಇಷ್ಟೊಂದು ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ.

ಇದು ಕೇವಲ ಸಮಯ ತೋರಿಸುವ ಯಂತ್ರವಲ್ಲ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತೀ ಅಮೂಲ್ಯವಾದ ಆಭರಣಗಳ ಅದ್ಭುತ ಸಂಗಮ ಇದರ ಮಾರುಕಟ್ಟೆ ಮೌಲ್ಯ ಸುಮಾರು 34 ಕೋಟಿ ರೂಪಾಯಿಗಳಾಗಿದ್ದರೂ, ಇದರ ಬೇಡಿಕೆ ಎಷ್ಟಿದೆ ಎಂದರೆ ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಇದು ಬರೋಬ್ಬರಿ 70 ಕೋಟಿ ರೂಪಾಯಿಗೆ ಮಾರಾಟವಾಗುತ್ತಿದೆ

ಯಾರ ಬಳಿ ಇದೆ ಈ ರೈನ್ಬೋ ವಾಚ್?

ಈ 70 ಕೋಟಿಯ ಕ್ಲಬ್ ಸೇರುವುದು ಸುಲಭದ ಮಾತಲ್ಲ. ಇದಕ್ಕೆ ಹಣದ ಜೊತೆಗೆ ಅತೀವ ಪ್ರಭಾವವೂ ಬೇಕು. ಭಾರತದಲ್ಲಿ ಈ ವಾಚ್ ಹೊಂದಿರುವ ಆ ಮೂವರು ಪ್ರಮುಖರೆಂದರೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಲ್ಮಾನ್ ಖಾನ್: ಬಾಲಿವುಡ್‌ನ ಸುಲ್ತಾನ್ ತಮ್ಮ ವಿಭಿನ್ನ ಹವ್ಯಾಸಗಳಿಗೆ ಹೆಸರಾದವರು.

ಕರಣ್ ಔಜ್ಲಾ: ಖ್ಯಾತ ಪಂಜಾಬಿ ಗಾಯಕ ಮತ್ತು ರಾಪರ್.

ಅನಂತ್ ಅಂಬಾನಿ: ಉದ್ಯಮಿ ಮುಖೇಶ್ ಅಂಬಾನಿ ಪುತ್ರ, ಇವರ ವಾಚ್ ಕಲೆಕ್ಷನ್ ಜಗತ್ತಿಗೇ ಗೊತ್ತು.

ಈ ಗಡಿಯಾರದ ವಿಶೇಷತೆ ಏನು?

ಕೇವಲ ಸಮಯ ನೋಡಲು ಇಷ್ಟೊಂದು ಬೆಲೆಯೇ? ಖಂಡಿತ ಇಲ್ಲ. ಇದರಲ್ಲಿರುವ ಕಲೆ ಮತ್ತು ತಂತ್ರಜ್ಞಾನವೇ ಇದಕ್ಕೆ ಅಷ್ಟು ಬೆಲೆ ತಂದುಕೊಟ್ಟಿದೆ:

ಈ ವಾಚ್‌ನಲ್ಲಿ ಬರೋಬ್ಬರಿ 131 ವಜ್ರಗಳು ಮತ್ತು 779 ವಿವಿಧ ವರ್ಣಗಳ ರತ್ನಗಳನ್ನು (Gemstones) ಬಳಸಲಾಗಿದೆ.

ಪ್ರತಿಯೊಂದು ಕಲ್ಲನ್ನು ಎಷ್ಟು ನಾಜೂಕಾಗಿ ಜೋಡಿಸಲಾಗಿದೆ ಎಂದರೆ, ಎಲ್ಲಿಯೂ ಲೋಹ ಕಾಣಿಸದೆ ಬಣ್ಣಗಳ ‘ಮಳೆಬಿಲ್ಲು’ (Rainbow) ಸುಂದರವಾಗಿ ಕಾಣಿಸುತ್ತದೆ.

ಇದು ಗಡಿಯಾರದ ಅತ್ಯಂತ ಸಂಕೀರ್ಣ ತಂತ್ರಜ್ಞಾನಗಳಲ್ಲಿ ಒಂದು. ಒಂದು ಪುಟ್ಟ ಬಟನ್ ಒತ್ತಿದರೆ ಸಾಕು, ಸಮಯಕ್ಕೆ ಅನುಗುಣವಾಗಿ ಇದು ಸುಂದರವಾದ ಸಂಗೀತದ ಲಯವನ್ನು ಹೊಮ್ಮಿಸುತ್ತದೆ.

ಇಡೀ ವಾಚ್ ಅನ್ನು 18 ಕ್ಯಾರೆಟ್ ರೋಸ್ ಗೋಲ್ಡ್‌ನಿಂದ ತಯಾರಿಸಲಾಗಿದೆ.ಆರಂಭದಲ್ಲಿ ಇದು ಮಹಿಳೆಯರಿಗಾಗಿ ಸಿದ್ಧವಾದ ವಿನ್ಯಾಸವಾಗಿದ್ದರೂ, ಇದರ ಅದ್ಭುತ ಲುಕ್ ನೋಡಿ ಜಗತ್ತಿನ ಖ್ಯಾತ ನಟರು ಮತ್ತು ಕ್ರೀಡಾಪಟುಗಳು ಕೂಡ ಇದನ್ನು ಧರಿಸಲು ಮುಗಿಬೀಳುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular