HomeBusinessಊಹೆಗೂ ಮೀರಿ ಏರಿಕೆ ಕಂಡ ಚಿನ್ನದ ದರ: ಕೊನೆಗೂ ₹1.50 ಲಕ್ಷದ ಗಡಿ ದಾಟಿದ 22K...

ಊಹೆಗೂ ಮೀರಿ ಏರಿಕೆ ಕಂಡ ಚಿನ್ನದ ದರ: ಕೊನೆಗೂ ₹1.50 ಲಕ್ಷದ ಗಡಿ ದಾಟಿದ 22K ಚಿನ್ನ

ಬೆಂಗಳೂರು: ನೀವು ಬಂಗಾರ ಕೊಳ್ಳುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಈ ಸುದ್ದಿ ಓದಿದ ಮೇಲೆ ನಿಮ್ಮ ನಿದ್ದೆ ಹಾರುವುದು ಗ್ಯಾರಂಟಿ ನಿನ್ನೆಯಷ್ಟೇ ಸ್ವಲ್ಪ ಸಮಾಧಾನವಾಗಿದ್ದ ಚಿನ್ನದ ಬೆಲೆ ಇಂದು (ಜ.28, ಬುಧವಾರ) ಅಕ್ಷರಶಃ ಬೆಂಕಿಯಂತೆ ಏರಿದೆ. ಹಳದಿ ಲೋಹದ ಬೆಲೆ ಏರಿಕೆಯ ವೇಗ ನೋಡಿದರೆ, ಸಾಮಾನ್ಯ ಜನರಿಗಂತೂ ಚಿನ್ನ ಈಗ ಕೇವಲ ಕನಸಿನ ಲೋಹವಾಗಿ ಉಳಿಯುವ ಆತಂಕ ಎದುರಾಗಿದೆ.

ಚಿನ್ನವನ್ನು ಸಂಪ್ರದಾಯಬದ್ಧವಾಗಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದಿನ ಈ ರಾಕೆಟ್ ವೇಗದ ಏರಿಕೆಯಿಂದಾಗಿ ಮದುವೆ-ಮುಂಜಿಗಳಿಗೆ ಚಿನ್ನ ಕೊಳ್ಳಬೇಕಾದವರು ನೂರು ಬಾರಿ ಯೋಚಿಸುವಂತಾಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಮತ್ತು ಆರ್ಥಿಕ ಅಸ್ಥಿರತೆ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಇಂದಿನ ಬೆಲೆ ಎಷ್ಟಿದೆ?

24 ಕ್ಯಾರೆಟ್ ಅಪರಂಜಿ ಚಿನ್ನ (99.9% ಶುದ್ಧತೆ):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಗ್ರಾಂ ಬೆಲೆ: ಇಂದು ₹16,517 (ನಿನ್ನೆ ₹16,195 ಇತ್ತು). ಅಂದರೆ ಒಂದೇ ಗ್ರಾಂ ಮೇಲೆ ಬರೋಬ್ಬರಿ ₹322 ಏರಿಕೆಯಾಗಿದೆ

10 ಗ್ರಾಂ ಬೆಲೆ: ಇಂದು ₹1,65,170. ನಿನ್ನೆಗಿಂತ ಬರೋಬ್ಬರಿ ₹3,220 ಹೆಚ್ಚಳ ಕಂಡಿದೆ.

100 ಗ್ರಾಂ ಬೆಲೆ: ಬರೋಬ್ಬರಿ ₹16,51,700! ನಿನ್ನೆಗಿಂತ ₹32,200 ರಷ್ಟು ಭಾರೀ ಏರಿಕೆ ಕಂಡಿದೆ.

22 ಕ್ಯಾರೆಟ್ ಆಭರಣ ಚಿನ್ನ:

1 ಗ್ರಾಂ ಬೆಲೆ: ಇಂದು ₹15,140 (ನಿನ್ನೆ ₹14,845 ಇತ್ತು). ಅಂದರೆ ₹295 ಹೆಚ್ಚಳ.

10 ಗ್ರಾಂ ಬೆಲೆ: ಇಂದು ₹1,51,400. ನಿನ್ನೆಗಿಂತ ₹2,950 ಬೆಲೆ ಏರಿದೆ

8 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಪಟ್ಟಿ

1 ಗ್ರಾಂ ಬೆಲೆ: ಇಂದು ₹12,388

10 ಗ್ರಾಂ ಬೆಲೆ:₹1,23,880

100 ಗ್ರಾಂ ಬೆಲೆ:₹12,38,800

ಭಾರತದ ವಿವಿಧ ನಗರಗಳಲ್ಲಿ 24K ಚಿನ್ನದ ಬೆಲೆ:

ಬೆಂಗಳೂರು: ರೂ. 16,517

ಚೆನ್ನೈ: ರೂ.16,734

ಮುಂಬೈ: ರೂ. 16,517

ದೆಹಲಿ: ರೂ. 16,530

ಕೋಲ್ಕತ್ತಾ: ರೂ. 16,517

ಹೈದರಾಬಾದ್: ರೂ. 16,517

ಕೇರಳ: ರೂ. 16,517

ಪುಣೆ: ರೂ. 16,517

ವಡೋದರಾ: ರೂ. 16,520

ಅಹಮದಾಬಾದ್: ರೂ. 16,520

ಬೆಳ್ಳಿಯ ದರ

ಇಂದು (ಜ.28, ಬುಧವಾರ) ಬೆಳ್ಳಿಯ ಬೆಲೆಯಲ್ಲಿ ಪ್ರತಿ ಗ್ರಾಂಗೆ ಬರೋಬ್ಬರಿ ₹10 ರಷ್ಟು ಹೆಚ್ಚಳವಾಗಿದೆ. ಅಂದರೆ, ನಿನ್ನೆಯಷ್ಟೇ ₹370 ಇದ್ದ ಒಂದು ಗ್ರಾಂ ಬೆಳ್ಳಿಯ ಬೆಲೆ ಇಂದು ₹380ಕ್ಕೆ ಬಂದು ನಿಂತಿದೆ.

1 ಗ್ರಾಂ ಬೆಳ್ಳಿ: ಇಂದು ₹380 (ನಿನ್ನೆ ₹370).

8 ಗ್ರಾಂ ಬೆಳ್ಳಿ: ಇಂದು ₹3,040 (ನಿನ್ನೆ ₹2,960).

10 ಗ್ರಾಂ ಬೆಳ್ಳಿ: ಇಂದು ₹3,800 ರಷ್ಟಿದೆ.

100 ಗ್ರಾಂ ಬೆಳ್ಳಿ: ಇದರ ಬೆಲೆ ಇಂದು ₹38,000 ಕ್ಕೆ ಏರಿಕೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular