HomeLatest NewsBREAKING: ಪೌರಾಯುಕ್ತಗೆ ಬೆದರಿಕೆ ಕೇಸ್: ರಾಜೀವ್ ಗೌಡ 3 ಮನೆಗಳಿಗೆ 2ನೇ ನೋಟಿಸ್ ಅಂಟಿಸಿದ ಪೊಲೀಸರು

BREAKING: ಪೌರಾಯುಕ್ತಗೆ ಬೆದರಿಕೆ ಕೇಸ್: ರಾಜೀವ್ ಗೌಡ 3 ಮನೆಗಳಿಗೆ 2ನೇ ನೋಟಿಸ್ ಅಂಟಿಸಿದ ಪೊಲೀಸರು

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ನಾಲ್ಕು ವಿಶೇಶ ತಂಡಗಳನ್ನು ರಚಿಸಿ ಬೆಂಗಳೂರು, ಕೋಲಾರ, ತಮಿಳುನಾಡು ಸೇರಿದಂತೆ ಹಲವೆಡೆ ಶೋಧಕಾರ್ಯ ನಡೆಸಲಾಗುತ್ತಿದೆ. ಆದರೆ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಎಲ್ಲಿದ್ದಾರೆ ಎಂಬುದೇ ಪೊಲೀಸರುಗೆ ತಿಳಿಯುತ್ತಿಲ್ಲ ಎನ್ನಲಾಗಿದೆ. ಈ ನಡುವೆ ರಾಜೀವ್ ಗೌಡ್ ಮನೆಗೆ ಎರಡನೇ ನೋಟಿಸ್ ಅಂಟಿಸಿದ್ದಾರೆ.

ರಾಜೀವ್ ಗೌಡಗೆ ನಿರೀಕ್ಷಣಾ ಜಾಮೀನು ಅರಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಎಫ್ ಐ ಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಕೂಡ ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ರಾಜೀವ್ ಗೌಡಗೆ ಬಂಧನ ಭೀತಿ ಮತ್ತಷ್ಟು ಹೆಚ್ಚಾಗಿದೆ. ನಾಪತ್ತೆಯಾಗಿರುವ ರಾಜೀವ್ ಗೌಡ ಬಂಧನ ಪೊಲೀಸರಿಗೆ ಸವಾಲಾಗಿದೆ. ಈ ನಡುವೆ ರಾಜೀವ್ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ.

ರಾಜೀವ್ ಗೌಡಗೆ ಸೇರಿದ ಮೂರು ಮನೆಗಳಿಗೆ ಪೊಲೀಸರು ಎರಡನೇ ನೋಟಿಸ್ ಅಂಟಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ರಾಜಿವ್ ಗೌಡ ನಿವಾಸ, ಬೆಂಗಳೂರಿನ ಸಂಜಯ್ ನಗರದಲ್ಲಿರುವ ನಿವಾಸ, ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿರುವ ನಿವಾಸಕ್ಕೆ ಶಿಡ್ಲಘಟ್ಟ ಪೊಲೀಸರು ಎರಡನೇ ನೋಟಿಸ್ ಅಂಟಿಸಿದ್ದಾರೆ. ಮತ್ತೊಂದೆಡೆ ರಾಜೀವ್ ಗೌಡಗಾಗಿ ಪೊಲೀಸರು ತೀವ್ರ ಶೋಧಕಾರ್ಯ ಮುಂದುವರೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular