HomeKarnatakaBIG NEWS: ಶಾಲಾ ಮಕ್ಕಳಿಗೆ 'ಶೂ' ಬದಲು 'ಚಪ್ಪಲಿ' ಭಾಗ್ಯ: ಮಾಹಿತಿ ಸಂಗ್ರಹಕ್ಕೆ ಶಿಕ್ಷಣ ಇಲಾಖೆ...

BIG NEWS: ಶಾಲಾ ಮಕ್ಕಳಿಗೆ ‘ಶೂ’ ಬದಲು ‘ಚಪ್ಪಲಿ’ ಭಾಗ್ಯ: ಮಾಹಿತಿ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಈ ಬಾರಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೂ ಬದಲು ಚಪ್ಪಲಿ ಭಾಗ್ಯ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹವಾಮಾನಕ್ಕೆ ಅನುಗುಣವಾಗಿ ಚಪ್ಪಲಿ ನೀಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಗಾಲ, ಬೇಸಿಗೆ ಸಂದರ್ಭಗಳಲ್ಲಿ ಶೂ-ಸಾಕ್ಸ್ ಧರಿಸಲು ಅಸಾಧ್ಯ. ಅಂತಹ ಜಿಲ್ಲೆಗಳನ್ನು ಪಟ್ಟಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 2015ರಲ್ಲಿಯೂ ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ನೀಡುವ ಪ್ಲಾನ್ ಇತ್ತು. ಆದರೆ ಕಾರಣಾಂತರಗಳಿಂದ ಚಪ್ಪಲಿ ನೀಡುವ ಯೋಜನೆ ಕೈಬಿಡಲಾಯಿತು. ಇದೀಗ ಮತ್ತೆ ಚಪ್ಪಲಿ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.

ರಾಜ್ಯದ ಹಲವೆಡೆ ಭಾರಿ ಮಳೆ, ಉರಿ ಬೇಸಿಗೆಯಲ್ಲಿ ಶೂ, ಸಾಕ್ಸ್ ಧರಿಸುವುದು ಕಷ್ಟಸಾಧ್ಯ. ದೀರ್ಘ ಕಾಲ ಶೂ ಧರಿಸಿದರೆ ಸೋಂಕು ತಗುಲುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ವಾಸನೆ ಬರುವ ಸಾಧ್ಯತೆ ಇದೆ. ಅದೇ ಚಪ್ಪಲಿಯಾದರೆ ಮಳೆಗಾಲ, ಬೇಸಿಗೆಗಳಲ್ಲಿಯೂ ಆರಾಮವಾಗಿ ಧರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಾರಿ ವಿದ್ಯಾರ್ಥಿಗಳಿಗೆ ಚಪ್ಪಲಿ ಭಾಗ್ಯ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular