ಸ್ಯಾಂಟಿಯಾಗೊ: ಭಾನುವಾರ ಚಿಲಿಯಾದ್ಯಂತ ಕಾಡ್ಗಿಚ್ಚುಗಳು ಸಂಭವಿಸಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮನೆಗಳು ನಾಶವಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ, ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ದೇಶದ ಮಧ್ಯ ಬಯೋಬಿಯೊ ಪ್ರದೇಶ ಮತ್ತು ನೆರೆಯ ನುಬಲ್ ಪ್ರದೇಶದಲ್ಲಿ, ರಾಜಧಾನಿ ಸ್ಯಾಂಟಿಯಾಗೊದಿಂದ ಸುಮಾರು 500 ಕಿ.ಮೀ ದಕ್ಷಿಣಕ್ಕೆ ವಿಪತ್ತಿನ ಸ್ಥಿತಿಯನ್ನು ಘೋಷಿಸಿದ್ದಾರೆ.
ಇದುವರೆಗೆ 8,500 ಹೆಕ್ಟೇರ್ಗಳಲ್ಲಿ ಹೊತ್ತಿ ಉರಿಯುತ್ತಿರುವ ಎರಡು ಡಜನ್ ಕಾಡ್ಗಿಚ್ಚುಗಳನ್ನು ನಿಯಂತ್ರಿಸಲು ಹರಸಾಹಸ ನಡೆಸಲಾಗಿದೆ. ಮತ್ತು 50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಚಿಲಿಯ ಭದ್ರತಾ ಸಚಿವ ಲೂಯಿಸ್ ಕಾರ್ಡೆರೊ ಹೇಳಿದ್ದಾರೆ.

