HomeLatest NewsBREAKING: ಜಮೀನು ಖರೀದಿ, ಮನೆ, ಫಾರ್ಮ್ ಹೌಸ್ ನಿರ್ಮಿಸಬೇಕೆಂಬ ಆಸೆ ಇದೆ: ‘ಬಿಗ್ ಬಾಸ್’ ವಿನ್ನರ್...

BREAKING: ಜಮೀನು ಖರೀದಿ, ಮನೆ, ಫಾರ್ಮ್ ಹೌಸ್ ನಿರ್ಮಿಸಬೇಕೆಂಬ ಆಸೆ ಇದೆ: ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟ

ಬೆಂಗಳೂರು: ನಾನೇ ‘ಬಿಗ್ ಬಾಸ್’ ವಿನ್ನರ್ ಆಗುತ್ತೇನೆ ಅಂದುಕೊಂಡಿರಲಿಲ್ಲ. ಈಗಲೂ ಇದೆಲ್ಲ ಕನಸು ಎನಿಸುತ್ತಿದೆ. ಗೆದ್ದಿರುವ ಹಣದಲ್ಲಿ ಮನೆ ಕಟ್ಟುವ, ಜಮೀನು ಮಾಡುವ ಆಸೆ ಇದೆ. ಹಳ್ಳಿಯಲ್ಲೇ ನೆಲೆಸಬೇಕೆಂಬ ಆಸೆ ಇದೆ ಎಂದು ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟರಾಜ್ ಹೇಳಿದ್ದಾರೆ.

‘ಬಿಗ್ ಬಾಸ್’ ಗೆದ್ದಿರುವುದನ್ನು ನನಗೆ ನಂಬಲು ಆಗುತ್ತಿಲ್ಲ. ಈಗಲೂ ಇದೆಲ್ಲವೂ ನನಗೆ ಕನಸು ಅನ್ನಿಸುತ್ತಿದೆ. ನಾನು ವಾಸ್ತವಕ್ಕೆ ಬರಲು ಇನ್ನೂ ಒಂದು ವಾರ ಬೇಕು. ಕರ್ನಾಟಕದ ಜನರ ಋಣವನ್ನು ನಾನು ಮರೆಯಲು ಆಗುವುದಿಲ್ಲ. ನಾನು ಸಾಯುವವರೆಗೂ ಕನ್ನಡ ಮರೆಯುವುದಿಲ್ಲ. ಹೊರಗಡೆ ಎಷ್ಟೊಂದು ಜನ ಪ್ರೀತಿಸುತ್ತಾರೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

‘ಬಿಗ್ ಬಾಸ್’ ಹೋಗಿ ಮೊದಲು ನಾನೇ ಕಮಿಟ್ ಆಗಿದ್ದು, ಏಳರಿಂದ ಎಂಟು ವಾರದವರೆಗೆ ಇರುತ್ತೇನೆ ಅಂದುಕೊಂಡಿದ್ದೆ. ಗೆದ್ದಿರುವ 50 ಲಕ್ಷ ರೂ. ಹಣದಲ್ಲಿ ಜಮೀನು ತೆಗೆದುಕೊಳ್ಳಬೇಕು. ಫಾರ್ಮ್ ಹೌಸ್ ಮಾಡಬೇಕು. ಮನೆ ಕಟ್ಟಬೇಕೆಂಬ ಆಸೆ ಇದೆ. ನಾನು ಕಾವ್ಯಾ ಒಳ್ಳೆಯ ಸ್ನೇಹಿತರು. ಅತಿ ಹೆಚ್ಚು ವೋಟು ಪಡೆದಿದ್ದೇನೆ ಅಂದಾಗ ತುಂಬಾ ಖುಷಿಯಾಯಿತು. ಕರ್ನಾಟಕದ ಜನರ ಋಣವನ್ನು ಸಾಯುವ ತನಕ ಮರೆಯುವುದಿಲ್ಲ ಎಂದು ಗಿಲ್ಲಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular