ಬೆಂಗಳೂರು: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಟ್ರೋಫಿ ಉಳಿಸಿಕೊಳ್ಳುವ ಐದು ಬಾರಿಯ ಚಾಂಪಿಯನ್ ಕರ್ನಾಟಕ ಕನಸು ಭಗ್ನವಾಗಿದೆ.
ಗುರುವಾರ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡ ವಿದರ್ಭ ವಿರುದ್ಧ ಪರಾಭವಗೊಂಡಿದೆ. ಕಳೆದ ಬಾರಿ ಫೈನಲ್ ನಲ್ಲಿ ವಿದರ್ಭ ಸೋಲಿಸಿದ್ದ ಕರ್ನಾಟಕ ಈ ಬಾರಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ತಂಡ 49.4 ಓವರ್ ಗಳಲ್ಲಿ 280ಕ್ಕೆ ಆಲ್ ಔಟ್ ಆಯ್ತು. ಆರಂಭಿಕ ಕುಸಿತದ ನಂತರ ಕರುಣ್ ನಾಯರ್ 76, ಕೆ.ಎಲ್. ಶ್ರೀಜಿತ್ 54, ಶ್ರೇಯಸ್ ಗೋಪಾಲ್ 36, ಧ್ರುವ ಪ್ರಭಾಕರ್ 28, ಅಭಿನವ್ 26 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ವಿದರ್ಭ ಪರ ದರ್ಶನ್ ನಲ್ಕಂಡೆ ಐದು ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿದರ್ಭ 46.2 ಓವರ್ ಗಳಲ್ಲಿ ಗೆಲುವಿನ ಕಂಡಿದೆ. ಅಮನ್ ಮೋಖಡೆ 138 ರನ್ ಗಳಿಸಿದರು. ಇದು ಋತುವಿನ ಅವರ ಐದನೇ ಲಿಸ್ಟ್ ಎ ಶತಕವಾಗಿದೆ. ಕನ್ನಡಿಗ ರವಿಕುಮಾರ್ ಸಮರ್ಥ್ ಅಜೇಯ 76, ಧ್ರುವ್ ಶೋರೆ 47 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಇದು ಹಾಲಿ ಚಾಂಪಿಯನ್ ಕರ್ನಾಟಕವನ್ನು ಸೋಲಿಸಿ ಸತತ ಎರಡನೇ ವಿಜಯ್ ಹಜಾರೆ ಟ್ರೋಫಿ ಫೈನಲ್ ತಲುಪಿತು. ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ವಿದರ್ಭ ಸೌರಾಷ್ಟ್ರ ಮತ್ತು ಪಂಜಾಬ್ ನಡುವಿನ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.

