ಬೀದರ್: ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ಮಾಂಜಾ ದಾರದಿಂದ ಮತ್ತೊಂದು ಅವಘಡ ಸಂಭವಿಸಿದೆ. ಬೀದರ್ ಜಿಲ್ಲೆ ಚಿಟಗುಪ್ಪದ ತಾಳಮಡಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 65ರ ಲ್ಲಿ ಬುಧವಾರ ಗಾಳಿಪಟದ ಮಾಂಜಾ ದಾರ ಕೊರಳಿಗೆ ಸುದ್ದಿಕೊಂಡು ಸಂಜುಕುಮಾರ ಗುಂಡಪ್ಪ ಹೊಸಮನಿ(48) ಸ್ಥಳದಲ್ಲೇ ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಗಾಳಿಪಟದ ಚೀನಾ ಮಾಂಜಾ ದಾರ ತಗುಲಿ ಯುವಕನ ಕೈಗೆ ಗಂಭೀರವಾದ ಗಾಯವಾಗಿದೆ. ಬೀದರ್ ತಾಲೂಕಿನ ರಂಜೋಳ ಖೇಣಿ ಗ್ರಾಮದ ಸಮೀಪ ಘಟನೆ ನಡೆದಿದೆ. ಹಳ್ಳಿಖೇಡ್ ಗ್ರಾಮದ ಯುವಕ ದಿಲೀಪ್ ಕೈಗೆ ಗಂಭೀರವಾದ ಗಾಯವಾಗಿದೆ. ತಂದೆಯ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ದಲ್ಲಿ ಮಾಂಜಾ ದಾರ ತಗುಲಿ ಆಳ ಗಾಯವಾಗಿದೆ.

