HomeLatest NewsBREAKING : ಹೃದಯಾಘಾತದಿಂದ ಕಾಗಿನೆಲೆ ಕನಕ ಗುರುಪೀಠದ 'ಸಿದ್ದರಾಮನಂದ ಶ್ರೀ' ವಿಧಿವಶ.!

BREAKING : ಹೃದಯಾಘಾತದಿಂದ ಕಾಗಿನೆಲೆ ಕನಕ ಗುರುಪೀಠದ ‘ಸಿದ್ದರಾಮನಂದ ಶ್ರೀ’ ವಿಧಿವಶ.!

ರಾಯಚೂರು : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಶ್ರೀ (49) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಇಂದು ಮುಂಜಾನೆ 3:40 ರ ಸುಮಾರಿಗೆ ಸ್ವಾಮೀಜಿ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಿಂಥಣಿಯ ಕನಕ ಗುರು ಪೀಠದಲ್ಲಿಯೇ ಸ್ವಾಮೀಜಿ ಅಂತ್ಯಕ್ರಿಯೆ ನಡೆಸಲಾಗುವುದು. ಹಾಲುಮತದ ಪದ್ದತಿಯಂತೇ ಅಂತ್ಯಕ್ರಿತೆಗೆ ಸಿದ್ದತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಾನಂದ ಸ್ವಾಮೀಜಿ (ಮೂಲ ಹೆಸರು ಮೋಹನ್ ಪ್ರದಾನ) ಅವರು ಕಾಗಿನೆಲೆ ಕನಕಗುರು ಪೀಠದ ಪ್ರಮುಖ ಸ್ವಾಮೀಜಿಗಳಾಗಿದ್ದರು, ಇವರು ಸಮಾಜಸೇವೆ, ಸಾಹಿತ್ಯ, ಮತ್ತು ಹಾಲುಮತ ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದ್ದರು. ಚಿತ್ರದುರ್ಗದವರಾದ ಇವರು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದು, ನಂತರ ಕನಕಗುರು ಪೀಠ ಸ್ಥಾಪಿಸಿ ಸಾಮೂಹಿಕ ವಿವಾಹ, ದಾಸೋಹ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದರು. ಚಿತ್ರದುರ್ಗದ ಚಳ್ಳಕೆರೆಯವರಾದ ಇವರು, ಮನೆ ತೊರೆದ ನಂತರ ವಿವಿಧ ಧರ್ಮಗಳ ಅಧ್ಯಯನ ಮಾಡಿ, ನಂತರ ಕನಕಗುರು ಪೀಠದ ಹಾಲುಮತ ಧರ್ಮದ ಸೇವೆಗೆ ಮೀಸಲಾದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular