HomeLatest NewsBREAKING : ಸ್ಯಾಂಡಲ್'ವುಡ್ ನಟಿ ಕಾರುಣ್ಯ ರಾಮ್’ಗೆ ಸಾಲಗಾರರ ಕಾಟ : ತಂಗಿ ವಿರುದ್ಧವೇ ದೂರು...

BREAKING : ಸ್ಯಾಂಡಲ್’ವುಡ್ ನಟಿ ಕಾರುಣ್ಯ ರಾಮ್’ಗೆ ಸಾಲಗಾರರ ಕಾಟ : ತಂಗಿ ವಿರುದ್ಧವೇ ದೂರು ಸಲ್ಲಿಕೆ.!

ಬೆಂಗಳೂರು : ಸ್ಯಾಂಡಲ್’ವುಡ್ ನಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಟಿ ಕಾರುಣ್ಯ ರಾಮ್ ಗೆ ಸಾಲಗಾರರ ಕಾಟ ಎದುರಾಗಿದ್ದು, ತಂಗಿ ವಿರುದ್ಧವೇ ಅವರು ದೂರು ನೀಡಿದ್ದಾರೆ.

ಏನಿದು ಘಟನೆ
ನಟಿ ಕಾರುಣ್ಯ ರಾಮ್ ತಂಗಿ ಸಮೃದ್ದಿ ರಾಮ್ ಅವರು ಬ್ಯುಸಿನೆಸ್ ಮಾಡುವುದಾಗಿ ಮನೆಯಲ್ಲಿ ಹೇಳಿಕೊಂಡು ಖಾಸಗಿ ವ್ಯಕ್ತಿಯಿಂದ 25 ಲಕ್ಷ ಸಾಲ ಪಡೆದಿದ್ದರು. ಈ ಹಣವನ್ನು ಆನ್ ಲೈನ್ ಬೆಟ್ಟಿಂಗ್ ಹಾಕಿ 25 ಲಕ್ಷ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮನೆಯಲ್ಲಿದ್ದ ಅಕ್ಕ ಕಾರುಣ್ಯ ರಾಮ್ ಅವರ ಚಿನ್ನದ ಒಡವೆಗಳನ್ನು ಕೂಡ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಸಮೃದ್ದಿ ಮನೆ ಬಿಟ್ಟು ಹೋಗಿದ್ದಾರೆ.

ಕಾರುಣ್ಯ ರಾಮ್ ಗೆ ಸಾಲಗಾರರ ಕಾಟ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಗಿ ಮಾಡಿದ್ದ ತಪ್ಪಿಗೆ ಅಕ್ಕ ಕಾರುಣ್ಯ ರಾಮ್ ಗೆ ಸಾಲಗಾರರು ಕಾಟ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ . ಮನೆ ಹತ್ತಿರ ಬಂದು ಗಲಾಟೆ ಮಾಡುವುದಲ್ಲದೇ ಜೊತೆಗೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ ಕಳಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಕಾರುಣ್ಯ ರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರುಣ್ಯ ರಾಮ್ ನೀಡಿದ ದೂರಿನ ಮೇರೆಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು. ನಂತರ ಸಿಸಿಬಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಂಗಿ ಸೇರಿ ಐವರ ವಿರುದ್ಧ ದೂರು
ಈ ಸಂಬಂಧ ತಂಗಿ ಸಮೃದ್ದಿ ರಾಮ್, ಕಪಿಲ್, ಪ್ರತಿಭ, ಪ್ರಜ್ವಲ್, ರಕ್ಷಿತ್, ಸಾಗರ್ ಸೇರಿ ಐವರ ವಿರುದ್ಧ ಕಾರುಣ್ಯ ರಾಮ್ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular