ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, 2026 ರ ಜನವರಿ 15 ರಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 7 ನೇ ರೈಲನ್ನು ಪ್ರಯಾಣಿಕರ ಸೇವೆಗೆ ಸೇರಿಸಿಕೊಳ್ಳುವುದಾಗಿ ಘೋಷಿಸಿದೆ.
ಈ ರೈಲಿನ ಸೇರ್ಪಡೆಯೊಂದಿಗೆ, ಹಳದಿ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಪೀಕ್ ಸಮಯದಲ್ಲಿ ಸುಧಾರಿತ ಆವರ್ತನವನ್ನು ಕಾಣಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ:
ಸೋಮವಾರದಿಂದ ಶನಿವಾರದವರೆಗೆ: ಪೀಕ್-ಅವರ್ ರೈಲು ಆವರ್ತನವನ್ನು ಈಗಿರುವ 13 ನಿಮಿಷಗಳ ಮಧ್ಯಂತರದಿಂದ ಪ್ರತಿ 10 ನಿಮಿಷಗಳಿಗೊಮ್ಮೆ ಹೆಚ್ಚಿಸಲಾಗುವುದು.
ಭಾನುವಾರಗಳು: ಪೀಕ್-ಅವರ್ ಆವರ್ತನವನ್ನು 15 ನಿಮಿಷಗಳಿಂದ 14 ನಿಮಿಷಗಳಿಗೆ ಇಳಿಸಲಾಗುತ್ತದೆ.
ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ಮತ್ತು ಕೊನೆಯ ರೈಲುಗಳ ಸಮಯಗಳಲ್ಲಿ ಎಲ್ಲಾ ದಿನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪ್ರಯಾಣಿಕರ ಸೌಕರ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಬದ್ಧವಾಗಿದೆ. ಪ್ರಯಾಣಿಕರು ಪರಿಷ್ಕೃತ ಆವರ್ತನವನ್ನು ಗಮನಿಸಿ ಸುಧಾರಿತ ಮೆಟ್ರೋ ಸೇವೆಗಳನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ.


